ಭ್ರಮಾಲೋಕದ ಸುತ್ತ ಒಂದು ಪಯಣ…..ಭಾರತಿ ಅಶೋಕ್

ವಿಶೇಷ ಲೇಖನ

ಭಾರತಿ ಅಶೋಕ್

ಭ್ರಮಾಲೋಕದ ಸುತ್ತ ಒಂದು ಪಯಣ

  ಒಮ್ಮೊಮ್ಮೆ ಕೆಲವರು ಭ್ರಮೆಯಲ್ಲಿ ಬದುಕುತ್ತಾ ವಾಸ್ತವದಿಂದ  ದೂರ ಉಳಿದುಬಿಡುತ್ತಾರೆ. ಎಷ್ಟರ ಮಟ್ಟಿಗೆ ಭ್ರಮೆಯನ್ನು  ಕಟ್ಟಿಕೊಂಡಿರುತ್ತಾರೆಂದರೆ : ವಾಸ್ತವವ (ಅರಿವ)ನ್ನು ನಿರಾಕರಿಸುವಷ್ಟು. ಭ್ರಮೆಗಳನ್ನು ಸೃಷ್ಟಿಸಿಕೊಂಡು ಅದನ್ನೆ ನಂಬಿ ಅದರಲ್ಲೇ ಸದಾ ಮಗ್ನರಾಗಿಬಿಡುವಷ್ಟು….

      ಒಂದು ಭ್ರಮೆಯನ್ನು ಬೇಕೋ ಬೇಡವೋ ಗೊತ್ತಿಲ್ಲದೇ ಮೊದಲು ಕಟ್ಟಿಕೊಳ್ಳುತ್ತಾರೆ ಸಂದರ್ಭವೂ, ಸನ್ನಿವೆಷವೂ ಅದಕ್ಕೆ ಪೂರಕವಾಗಿರುತ್ತದೆ(ಹಾಗೆ ಅನ್ನಿಸುತ್ತದೆ), ಆ ಭ್ರಮೆಯನ್ನು ಪೂರ್ಣಗೊಳಿಸಿಕೊಳ್ಳಲು ಮತ್ತೊಂದು ಭ್ರಮೆಯನ್ನು ಕಟ್ಟಿಕೊಳ್ಳುವರು  ಅದಕ್ಕಿಂತ ಮುಖ್ಯವಾಗಿ ಭ್ರಮೆ ಹಾಗೂ ವಾಸ್ತವದ ನಡುವೆ  ಅಂತವರಿಗೆ ವ್ಯತ್ಯಾಸವೇ ಇರುವುದಿಲ್ಲ. ಆ ಭ್ರಮೆಯನ್ನು ತಣಿಸಲು ಮತ್ತೊಂದು ಮೊಗದೊಂದು ಹೀಗೆ ಒಂದರ ಹಿಂದೆ ಒಂದರಂತೆ ಸರಪಳಿಯೋಪದಿಯಾಲ್ಲಿ ಭ್ರಮೆಗಳನ್ನು ಹೆಣೆಯುತ್ತಾ ಅದರಲ್ಲಿ  ತನ್ನನ್ನು ತಾನು ಬಂಧಿಸಿಕೊಳ್ಳುತ್ತಾ ಸಾಗುತ್ತಾರೆ.’ತಿರುಣಿ ಹುಳ’ದಂತೆ ತಮ್ಮ ಸುತ್ತ ತಾವೇ ಭ್ರಮೆಯ ಬಲೆಯನ್ನು ಎಣೆದುಕೊಳ್ಳುತ್ತಾರೆ.

     ಯಾರಾದರೂ ವಾಸ್ತವದ ಬಗೆಗೆ ಮಾತನಾಡಿದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಅವರಿಗಿರುವುದಿಲ್ಲ ಅವರ ವಿರುದ್ಧ ಆಕ್ರೋಶಗೊಳ್ಳುತ್ತಾರೆ, ಕಾರಣ ವಾಸ್ತವದಿಂದ ತಮ್ಮನ್ನು ತಾವು ದೂರ ಮಾಡಿಕೊಂಡಿರುತ್ತಾರೆ,ವಾಸ್ತವಕ್ಕಿಂತ ಭ್ರಮೆಯನ್ನೆ ಹೆಚ್ಚು ಪ್ರೀತಿಸುತ್ತಾರೆ, ಅದರಲ್ಲೇ ದಿನವೆಲ್ಲಾ ಕಳೆಯುತ್ತಾರೆ, ಅವರು ಮಾಡುತ್ತಿರುವುದು ತಪ್ಪಲ್ಲ, ತಾವು  ಅಂದುಕೊಂಡಿರುವುದೇ ಸರಿ ಎನ್ನುವ ಮನೋಭಾವ ಬೆಳೆಸಿಕೊಂಡಿರುತ್ತಾರೆ.

       ಇಂಥ ಭ್ರಮೆಯುಳ್ಳವರು ಹೆಚ್ಚಾಗಿ ಬದುಕಿನಲ್ಲಿ ಅಭದ್ರತೆಯನ್ನು ಎದುರಿಸುತ್ತಿರುತ್ತಾರೆ.ಅಭದ್ರತೆಯ ಕಾರಣಕ್ಕಾಗಿ ಇಂಥ ಯಾವುದೋ ಭ್ರಮೆಗೆ ತಮ್ಮನ್ನು ಒಳಗುಮಾಡಿಕೊಂಡು ಆದಷ್ಟು ಭದ್ರತೆಯನ್ನು ಕಲ್ಪಿಸಿಕೊಂಡು ಅದನ್ನು ತುಂಬಿಕೊಳ್ಳಲು ತಮಗರಿವಿಲ್ಲದೇಯೇ ಪ್ರಯತ್ನಿಸುತ್ತಿರುತ್ತಾರೆ.ಇದರಿಂದ ಯಾರಿಗೂ, ಯಾವ ವಿಷಯಕ್ಕೂ ಮೊಸ ಮಾಡುವ ಮನೊಭಾವವಾಗಲಿ,  ಗುರಿಯಾಗಲಿ ಅವರಲ್ಲಿ ಇರಿವುದಿಲ್ಲ, ಆದರೆ ಖಂಡಿತ ವೈಯಕ್ತಿಕ ನಷ್ಟ ಶತಸಿದ್ಧ

      ಎಲ್ಲಿಯವರೆಗೆ ಈ ಭ್ರಮೆಯಲ್ಲಿ ಬದುಕುತ್ತಾರೆಂದರೆ, ಸ್ವತಃ ತಾವು ಕಟ್ಟುಕೊಂಡಿರುವ  ಭ್ರಮೆಯೇ, ಅಥವಾ ಭ್ರಮೆಗೆ ಕಾರಣವಾದ ವಸ್ತು, ವಿಷಯ,ವ್ಯಕ್ತಿ ಎದುರು ನಿಂತು ಇದೆಲ್ಲಾ ನಿಜವಲ್ಲ ನೀನು ಮಾಡಿಕೊಂಡಿರುವುದು ತಪ್ಪು, ಅದು ಕೆವಲ ಭ್ರಮೆ,ವಾಸ್ತವದಲ್ಲಿ ಅದು ಸಾಧ್ಯವಿಲ್ಲ  ಎಂದು ಹೇಳಿದಾಗಲೂ ವಾಸ್ತವಕ್ಕೆ ಬರಲು ಸಾಧ್ಯವಾಗದಿರಬಹುದು, ಅದರೆ ಅದರ ಅರಿವಾಗಿ ವಾಸ್ತವಕ್ಕೆ ಬಂದರೆ ಆಕಾಶದೆತ್ತರಕ್ಕೆ ಕೊಂಡೊಯ್ದು ನೆಲಕ್ಕೆ ಬೀಸಿ ಎಸೆದಂತಹ ಅನುಭವವಾಗುವುದು ಖಂಡಿತ.


ಭಾರತಿ ಅಶೋಕ್.

Leave a Reply

Back To Top