ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಪ್ರಿಯ ಗೆಳತಿ.
ಪ್ರೀತಿಯ ನೆನಪುಗಳು
ಮನವೆಲ್ಲಾ ಮಿಂದೆದ್ದು
ಹ್ರದಯದಲಿ ಹಾಸುಹೊಕ್ಕಾಗಿವೆ
ನಿನ ಮಾತುಗಳು ಪ್ರಿಯಗೆಳತಿ
ಸುಖವಿರಲಿ ದುಃಖವಿರಲಿ
ನಿನ ಮುದ ಮಾತುಗಳು
ದಾರಿ ದೀವಿಗೆ
ಪ್ರಿಯ ಗೆಳತಿ
ಇಹಲೋಕದ ಗೆಳೆತನಕೆ
ಸುಮಧುರವ ತೀಡಿ
ಬಾಳ ಬದುಕನಲಿ ಮಲ್ಲಿಗೆಯಾದೆ ಪ್ರಿಯಗೆಳತಿ
ಕಣ್ಣಂಚಿನ ಪೊರೆಯಲಿ
ಕಪಟವರಿಯದ ಮನಸಲಿ
ಕರವಿಡಿದು ಕಂಬನಿಯ ಒರೆಸಿದ ಪ್ರಿಯ ಗೆಳತಿ
ಪಿಸು ಮಾತಿಂದ ಸಮಾಧಾನಸಿ
ಪಡಿಪಟ್ಲಗಳ ಪಾರುಮಾಡುವಿಕೆಗೆ
ನೀ ತ್ರಾಣವಾದಿ ಪ್ರಿಯಗೆಳತಿ
ಭರವಸೆಯ ಭಾವನೆಯ
ಬೆಸುಗೆಯ ಬೆಸೆದು
ಗೆಳೆತನದ ಬಾಂಧವ್ಯಕೆ
ಜೀವ ತುಂಬಿದ ಪ್ರಿಯಗೆಳತಿ.
ಬಾಲ್ಯದಾಟವನು ನೆನೆನೆನಸಿ ನಕ್ಕು
ಸಿಟ್ಟು ಸೆಡವಿನಲಿ ಟೂ ಬಿಟ್ಟು ಮರುದಿನವೆ ಕೂಡಿ ಆಡಿದ ಆ ಗಳಿಗೆಯ ನೆನಪನು ಮೆಲುಕ ಹಾಕುವ ಪ್ರಿಯ ಗೆಳತಿ.
ಇಳಿವಯಸಿನಲಿ ಸಂಸಾರ
ಮನೆಮಕ್ಕಳ ಸುಖ ದುಃಖಗಳಲೂ ಪಾಲಾಗಿ
ನನಗೆ ನೀನು ನಿನಗೆ ನಾನು
ಮನದಾಳದ ಮಾತುಗಳಿಗೆ
ಗಂಧ ತೀಡುವ ಪ್ರಿಯಗೆಳತಿ
ಅದೆಂತ ಶಕುತಿ ಗೆಳೆತನದ
ಒಡನಾಟಕೆ ನಾ ಅರಿಯೆ
ಹ್ರದಯಸ್ಪಂದನದ ಗೆಳತಿ
ಭಾವಗೀತೆಗೆ ಜೊತೆಯಾದ ಜೊತೆಗಾತಿ ಓ ಪ್ರಿಯ ಗೆಳತಿ,ಓ ಪ್ರಿಯ ಗೆಳತಿ.
ಲಲಿತಾ ಪ್ರಭು ಅಂಗಡಿ.