ಮಕ್ಕಳ ಕವಿತೆ
ಅರುಣಾ ರಾವ್
ಅಜ್ಜಿಯ ಮನೆ
ಅಜ್ಜಿಯ ಮನೆಗೆ ಹೋಗ್ಬೇಕಮ್ಮ
ಬೇಸಿಗೆ ರಜೆಯು ಬಂದಾಯ್ತು
ಅಜ್ಜಿಯ ಕೈರುಚಿ ಚಕ್ಕುಲಿ ಮುರುಕು
ಪ್ರತಿದಿನ ಸವಿಯುವ ಹೊತ್ತಾಯ್ತು
ಕೆರೆಯ ದಡದಲ್ಲಿ ಕುಳಿತು ಕಾಲನು
ನೀರಿಗೆ ಪಟಪಟ ಬಡಿಬೇಕು
ಹಿತ್ತಲ ಮಾವು ನೇರಳೆ ಸೀಬೆ
ಸೀತಾಫಲವನು ತಿನ್ನಬೇಕು
ಮಾವಿನ ಮರಕೆ ತೂಗುಯ್ಯಾಲೆ
ಕಟ್ಟುತ ಜೀಕುತ ನಗಬೇಕು
ಬಸ್ಸು ಕಾರುಗಳ ಭರಾಟೆ ಇಲ್ಲದೆ
ಹಾದಿ ಬೀದಿಯಲಿ ಕುಣೀಬೇಕು
ಹಕ್ಕಿಯ ಗೂಡನು ಕಾಣುತ ಸನಿಹದಿ
ಕೈ ಚಪ್ಪಾಳೆಯ ಬಡೀಬೇಕು
ಕಾಕ ಮೈನಾಕ ಕೋಗಿಲೆ ಕಂಠವ
ಅನುಸರಿಸಿ ಹರ್ಷವ ಪಡಬೇಕು
ಹೊರಡಲೆಬೇಕು ನಾವೀವಾಗಲೆ
ಏರುವ ಬಾರೇ ಬಸ್ಸನ್ನುಮ ಬಸ್ಸನ್ನು
ಅಜ್ಜಿಯ ಊರಲಿ ರಜವನು ಕಳೆದು
ಕಟ್ಟುವ ಬಾಲ್ಯದ ನೆನಪನ್ನು
ಅರುಣಾ ರಾವ್
ಬಹಳ ಚಂದಾಗಿ ಬರೆದಿದ್ದೀರಿ ಅರುಣಾ ಮೇಡಂ.