ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ
ನಾನು ಮತ್ತು ಸಂಪ್ರದಾಯ
ಬೆಳಗಾಗ
ದೇವರ ಕೋಣೆಯ ಪೀಠದ ಮೇಲೆ ಆಸೀನ
ಅಜ್ಜಿ
ಕೊಲ್ಲಾಪುರದ ಸೀರೆ
ಹಣೆ ತುಂಬಾ ಕುಂಕುಮದ
ನೀರೆ ನನ್ನಜ್ಜಿ
ಮೂಗಲ್ಲಿ ನತ್ತು ,ಅದೇನು ಗತ್ತು
ಕಿವಿಯಲ್ಲಿ ವಜ್ರದೋಲೆ
ಬಾಯಲ್ಲಿ ವೀಳ್ಯದೆಲೆ!!
ಅಬ್ಬಬ್ಬ
ದೇವಿಯೋ ಅಜ್ಜಿಯೋ
ದಿಗಿಲು ದಿಗ್ಬಂದನ
ಅಂದೇ ಅಮ್ಮನ
ಫೋಟೋದಲ್ಲೂ ಅದೇ
ನಮ್ಮಜ್ಜಿ ದಿರಿಸು!
ನನಗೆ ನನ್ನ
ಮೈಮೇಲಿದ್ದ ತಲೆ ನನ್ನದೋ
ಅಜ್ಜಿಯದೋ ತಿಳಿಯದ
ಸಂಭ್ರಾಂತಿ
ಸಂಭ್ರಮ
ಅಲ್ಲೇ ಆಡುತ್ತಿದ್ದ ಮೊಮ್ಮಗಳು
ತನ್ವಿ
ತೊಡೆ ಮೇಲೇರಿ ನನ್ನ
ಅಜ್ಜ ನೀನೇಕೆ ಹೀಗೆ
ಹಣೆ ಮೇಲೆ ನಾಮ
ಖಾಲಿ ತಲೆ ಮೇಲೇಕೆ ಈ
ಭಾರೀ ಪೇಟ
ಮತ್ತೇಕೆ ಅಜ್ಜ ಈಗೀಗ
ಕಚ್ಚೆ ಪಂಚೆ, ಜರತಾರಿ ಅಂಚು
ಕೊಲ್ಲಾಪುರ ಚಪ್ಪಲಿ ಮಿಂಚು
ಮೊಮ್ಮಗಳ ಮಾತು
ಮಿಂಚು ಹೊಡೆಯುವ
ಸಂಚು
ನಾನೀಗ ನಾನೋ
ಅಥವ ಅಜ್ಜ, ನೀನೋ
ಇಲ್ಲದ ತಲೆ ಕೆಡಿಸಿಕೊಂಡೆ
ದೇವರ ಕೋಣೆಯ
ಪೀಠದ ಮೇಲೆ
ನನ್ನವಳ ಕಂಡೆ!!
Beautiful ❤️
Thanq smitha
Niceeeeee
Thanks!!
I is not valid in front of heritage or culture. I becomes zero.
Traditions are in continuity
Very nice i liked the first page … picture come while reading
Beautiful
ಅಜ್ಜ ಅಜ್ಜಿ ನಾನು ತನ್ವಿ ಎಲ್ಲಾ ಪ್ರತಿಮೆಗಳು
ಅಜ್ಜ ಅಜ್ಜಿ ಪ್ರಭಾವ ನನ್ನ ಮೇಲೆ ಬಹಳಷ್ಟು !
Your beautiful illustration made me picturise ayya and great grand mother. ❤️
Deepamma glad for your appreciations
Very nice!
Thanks Usha
That was an attempt to self finding in the passage of traditions
ಸುಂದರವಾದ ಹಾಡಿನ ಶೀರ್ಷಿಕೆ
ಸಂಪ್ರದಾಯ, ಪರಂಪರೆ ,ಇವೆಲ್ಲವನ್ನು
ಅತಿ ಸುಂದರವಾಗಿ ಈ ಕವಿತೆಯಲ್ಲಿ
ತಳಿಯಪಡಿಸಿದ್ದೀರಿ.ಅಜ್ಜ ಅಜ್ಜಿಯರ
ಜತೆಯಲ್ಲಿ ಮೊಮ್ಮಕ್ಕಳು ಇವೇಲ್ಲವನ್ನು ತಿಳಿದು
ತಮ್ಮ ಜೀವನದಲ್ಲಿ ಅನುಕರಿಸಲೆಂದು
ನಾನು ಹಾರೈಸುತ್ತೇೆನೆ.❤️
Thanks Manjanna
ಸಂಪ್ರದಾಯ ಗಳನ್ನು ನೆನಪಿಸಿ ಕೊಳ್ಳುವ ಒಂದು ಪ್ರಯತ್ನ
ಬೆಳಗಾಗೆದ್ದು ಅಜ್ಜ ಅಜ್ಜಿಯರನ್ನು ದೇವರ ಪೀಠದಲ್ಲಿ ಕಂಡು ಸಂಜೆಯಾಗುವಾಗ ನಮ್ಮನ್ನೇ ಅಲ್ಲಿ ಕೂರಿಸಿ ಕೊಳ್ಳುವಂತದ್ದು ಜೀವನ ಯಾತ್ರೆಯ ದೊಡ್ಡ ಘಟ್ಟದ ಸಮ್ ಕ್ಷಿಪ್ತ ವಿವರಣೆ. ಅದರಲ್ಲೂ ಕೊಲ್ಲಾಪುರಿ ಸೀರೆ. ವಾಹ್. ಇನ್ನೊಂದು ವಾರದಲ್ಲಿ ಮತ್ತೆ ಕೊಲ್ಹಾಪುರ ಕ್ಕೇ ಹೊಗುವ ನನಗೆ ಅದೂ ಆಪ್ಯಾಯಮಾನ ಎನಿಸಿತು. ಅಜ್ಜ ಅಜ್ಜಿ ತನ್ವಿ ಎಲ್ಲಾ ಈ ಲೋಕದಲ್ಲಿ ನಿಮಿತ್ತ ಮಾತ್ರ.
ಬಹಳ ಚೆನ್ನಾಗಿದೆ.
Thank you Surya
ನಿಜಕ್ಕೂ ನಾವೆಲ್ಲ ಪ್ರತಿಮೆಗಳು
ಕವನಕ್ಕೆ ಮಾತ್ರ ಅಲ್ಲ @
Nice song, Congratulations Venkatesh.
Thank you Dr