ಕಾವ್ಯ ಸಂಗಾತಿ
ನೀಲಿಯುಡುಗೆಯ ಕನಸುಗಳು
ಸುರೇಶ್ ಕಲಾಪ್ರಿಯಾ
ನಮ್ಮಯ ಶಾಲೆಯು ನಮಗೆ ಹೆಮ್ಮೆಯು
ಬರುವೆವು ತಪ್ಪದೇ ದಿನವೂ
ಕನಸಿನ ನೀಲಿಯ ತೊಡುವೆವು ಮೈಗೆ
ತೀರಾ ಹತ್ತಿರ ಆಗಸವೂ
ಕೇಳುವೆವೆಲ್ಲಾ ಗುರುಗಳ ಮಾತನು
ಕಲಿಸುವ ಅಕ್ಷರ ಕಲಿತು
ಸಾಕ್ಷರ ಭಾವ ಮೂಡಲು ಮನದಲಿ
ನೌಕರಿ ಕನಸು ಮೊಳೆತು
ಗುರುಗಳ ಮುದ್ದಿನ ಮಕ್ಕಳು ನಾವು
ಶಿಸ್ತಿನ ಸಿಪಾಯಿ ಎನಿಸುವೆವು
ಅವರಿವರೆಲ್ಲರೂ ಮೆಚ್ಚುವ ಹಾಗೇ
ಗುರುಗಳ ನಾಮವ ಬೆಳಗುವೆವು
ದೂರದ ಗುರಿಯ ಕನಸನು ತಿಳಿಸಿ
ನನಸು ಮಾಡಲು ಶ್ರಮಿಸುವೆವು
ಬೆನ್ನ ಹಿಂದಿನ ಗುರುವಿನ ಶಕ್ತಿಯ
ದಿಗಂತ ತಲುಪಲು ಬಳಸುವೆವು
ಸಾಟಿಯೇ ಇಲ್ಲದ ಶೂರರು ನಾವು
ಸಾಹಸ ಕಾರ್ಯಕೆ ಅಂಜೆವು
ಸರ್ಕಾರಿ ಶಾಲೆಯ ಸುಮಗಳು ನಾವು
ಪರಿಮಳ ಸೂಸುತ ನಡೆವೆವು
ಕಡಿಮೆಯೇನಿಲ್ಲ ಯಾವುದರಲ್ಲೂ
ಆಟ – ಪಾಠ ಸರ್ವಸ್ವದಲಿ
ಬಡತನವೊಂದೇ ಬೆನ್ನಿಗೆ ಅಡ್ಡಿ
ಹಿಂಜರಿಯುವುದಿಲ್ಲ ನಾವಿಲ್ಲಿ