“ಕಡಲಾಳದವಳು”ಇಂಗ್ಲೀಷ್ ಕವಿತೆಯ ಅನುವಾದ ಸುಮಾ ರಮೇಶ್

ಅನುವಾದ ಸಂಗಾತಿ

“ಕಡಲಾಳದವಳು”

ಮೂಲ: Tapiwa Mugabe


ಕನ್ನಡಕ್ಕೆ: ಸುಮಾ ರಮೇಶ್

ಕಡಲಾಳದವಳು”


ಅವಳು ಉತ್ಕಟವಾಗಿ ಬಯಸುತ್ತಿದ್ದದ್ದು ಮೈಮುರಿದು ಹಾಗೆ ಚಾಚಿಕೊಂಡು ವಿರಮಿಸಲೊಂದು ಜಾಗ,
ಹಾರ್ದಿಕವಾಗಿ ನಗಲು ಹಾಗೂ ತನ್ನ ಕೂದಲನ್ನು ಹರವಿ ಆರಾಮವಾಗಿ ಕೂರಲೊಂದು ಸ್ಥಳ,
ಅವಳ ಕಾಲುಗಳನ್ನು ಗಾಯಗೊಳಿಸದೆ ಮತ್ತು ತರಚದೆ ನಡೆಯಲೊಂದು ತಾಣ;
ಸಂಕೋಲೆಗಳಿರದ ಪ್ರದೇಶ,
ಸಾಗರದ ಉಸಿರಿನಿಂದ ಜನ್ಮ ತಾಳಿದವಳವಳು,
ನೆನಪಿಸಬೇಕಾಯಿತು ಇದನ್ನವಳಿಗೆ ನಾನು,
ತಮಗಾಗಿ ಜಾಗವುಳಿಸಿಕೊಳ್ಳದ ಹೃದಯಗಳಿಗೆ ನಿನ್ನನ್ನು ಅತಿಯಾಗಿ ಸುರಿದು ಕೊಡುವುದನ್ನು ನಿಲ್ಲಿಸು,
ನಿನ್ನನ್ನು ನೀನು ಕೃಶಗೊಳಿಸಿಕೊಳ್ಳದಿರು;
ಅನಂತವಾಗು,
ನದಿಯ ಬಳಿಗೆಂದೂ ಕಡಲನ್ನು ತರುವ ಪ್ರಯತ್ನ ಮಾಡದಿರು!


ಸುಮಾ ರಮೇಶ್, ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ.  ಭರತನಾಟ್ಯ ಕಲಾವಿದೆ ಹಾಗೂ ಸಾಹಿತ್ಯಾಭಿಮಾನಿ. ತಮ್ಮ ‘ಲಾಸ್ಯ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ‘ ಮುಖಾಂತರ ಸುಮಾರು 25 ವರ್ಷಗಳಷ್ಟು ಕಾಲ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಂಸ್ಕೃತಿಕ ಉತ್ಸವಕ್ಕೆ ನೃತ್ಯ ಹಾಗೂ ನಾಟಕ ಸ್ಪರ್ಧೆಗಳ ತೀರ್ಪುಗಾರರಾಗಿ ಭಾಗವಹಿಸಿದ ಅನುಭವವಿದೆ. ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ನೃತ್ಯ ಹಾಗೂ ನಿರೂಪಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವಿದೆ. ಕನ್ನಡ ಉಪನ್ಯಾಸಕಿ‌ ಹಾಗೂ ಶಾಲೆಯಲ್ಲಿ ಶಿಕ್ಷಕಿಯಾಗಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಧ್ಯಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಪಿ. ಎಚ್ ಡಿ ಸಂಶೋಧನೆ ಮಾಡುತ್ತಿದ್ದಾರೆ.   ಹೊಸ ವಿಷಯಗಳನ್ನು ಕಲಿಯುವಲ್ಲಿ ,ವೈಚಾರಿಕ ಚರ್ಚೆ, ಸಂವಾದಗಳಲ್ಲಿ ಸಕ್ರಿಯವಾಗಿ ಭಾಗಿವಹಿಸುವುದು ಇವರ ಆಸಕ್ತಿ. ಮಲೆಯಾಳಂನ ಎರಡು ವ್ಯಕ್ತಿತ್ವ ವಿಕಸನದ ಕತೆಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ ಅನುಭವವಿದೆ. ಸುಮಾರು ಆರು ನೂರಕ್ಕೂ ಹೆಚ್ಚು ಕಿರು ಕವನಗಳನ್ನು ರಚಿಸಿದ್ದಾರೆ.
ಇವರು ಹಲವು ಸಂಶೋಧನಾ ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಹಲವು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧ ಮಂಡನೆಯನ್ನು ಮಾಡಿದ್ದಾರೆ.

9 thoughts on ““ಕಡಲಾಳದವಳು”ಇಂಗ್ಲೀಷ್ ಕವಿತೆಯ ಅನುವಾದ ಸುಮಾ ರಮೇಶ್

  1. ಎಲೆಮರೆಯ ಕಾಯಿಯಂತೆ ಸುಪ್ತವಾಗಿರುವ ನಿಮ್ಮ ಜ್ಞಾನದ ಬೆಳಕು ಹೀಗೆ ಮತ್ತಷ್ಟು ಒಳ್ಳೆ ಕವಿತೆಗಳನ್ನು ರಚಿಸುತ್ತ , ಅನುವಾದಿಸುತ್ತ ಮುಂದೆಸಾಗಲಿ ಎಂದು ಆಶಿಸುತ್ತೇನೆ. ಶುಭವಾಗಲಿ

    1. ನಿಮ್ಮ ಪ್ರೋತ್ಸಾಹ ಹಾಗೂ ಅಕ್ಕರೆಯ ನುಡಿಗಳಿಗೆ ಧನ್ಯವಾದಗಳು ಮೇಡಂ..

  2. ಬಹುಮುಖ ಪ್ರತಿಭೆಯ ಸುಮಾ ರಮೇಶ್ ಅವರಿಗೆ ಅಭಿನಂದನೆಗಳು.
    ಸಾಧ್ಯವಾದರೆ ನಾವೂ ಮೂಲ ಕೃತಿಯನ್ನು ಓದುವಂತೆ ಮಾಡಿ.

  3. ಹಲವು ಪ್ರತಿಭೆಗಳ ಸಂಗಮವಾಗಿರುವ ತಮ್ಮ ಈ ಕವನದ ಅನುವಾದ ಅಂದವಾಗಿದೆ.ಮುದ ನೀಡಿದೆ.

Leave a Reply

Back To Top