ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಾಯ್ಕುಗಳು

ಸಿದ್ದಲಿಂಗಪ್ಪ ಬೀಳಗಿ


ಮರೆತಳಾಕೆ
ಚಿನ್ನದಾಸೆ; ಸಿಕ್ಕಾಗ
ಅಸಲಿ ಮುತ್ತು

ಸಮರಸದ
ಬದುಕನು; ಸವಿದು
ಉಂಡವ ಜಾಣ

ಕುಸಿದು ಬಿದ್ದ
ನೈತಿಕತೆ; ಕುಹಕ
ಮಾಡಿದ ಸುಳ್ಳು

ಹಾದರಗಿತ್ತಿ
ಹಗರಣ; ಬೆಚ್ಚಿದ
ಪಾತರಗಿತ್ತಿ

ಬೋಳಾದ ಮರ
ಚಿಗುರಿ; ವನಕೆಲ್ಲ
ಹಸಿರುಡುಗೆ

ಮಿಲನೋತ್ಸವ
ಗೆದ್ದ ಅದೃಷ್ಟವಂತ
ಕೋಟಿಯಲೊಬ್ಬ

ಕಣ್ಮುಚ್ಚಿ ಬೆಲ್ಲ
ಕೊಡುವಾಗ; ತೂಕದ
ಲೆಕ್ಕ ಸಿಗದು

ದಿವ್ಯ ಮೌನಿಯ
ಚರ್ಮ ಕೆರೆದೆ; ನೂರು
ಕತೆಯ ಮಾತು


    About The Author

    Leave a Reply

    You cannot copy content of this page

    Scroll to Top