ನಾಗಜಯ. ಗಂಗಾವತಿ ಕವಿತೆ-ಅಸ್ತಿತ್ವ

ಕಾವ್ಯ ಸಂಗಾತಿ

ಅಸ್ತಿತ್ವ

ಅಸ್ತಿತ್ವ

ನಾಗಜಯ ಗಂಗಾವತಿ.

ಅರೆ!!!… ನಾನೆಲ್ಲಿ
ಹುಡುಕುತ್ತಾ ಹೋದಂತೆ
ನನಗೆ ನಾ ಸಿಗುತ್ತಿಲ್ಲ.

ನಾನೊಂದು ಬೀಜವಾಗಿದ್ದೆ
ಚಿಗುರಿದ್ದೆ ಹೂ ಕಾಯಿ ಹಣ್ಷು
ಹಂಚುವ ಚೆಲವು — ಬಲವು ನಾನಾಗಿದ್ದೆ.

ಸುತ್ತೆಲ್ಲಾ ಹಸನಾದ ಹಸಿರಿತ್ತು
ಆಗಸದತ್ತ ಸೊಕ್ಕಿನಿಂತ ಗಿರಿ ಇತ್ತು
ಮೈದಡವಿ ವಿಚಾರಿಸಲು
ಬಿಸಿಲು ಮತ್ತು ಧರಿ ಇತ್ತು.

ಕಡಿದು ಹಾಕಿದಂತೆಲ್ಲ ಚಿಗಿತವನು
ಅದುಮಿದಂತೆಲ್ಲ ಜಿಗಿದವನು
ಅವಗಣನೆಗೆ ಒಳಗಾದಾಗಲೆಲ್ಲಾ…
ವಾಗ್ವಾದಗಳಿಗೆಲ್ಲಾ ಜಗ್ಗದೆ ಬೀಗಿನಿಂತವನು.

ಶಿಖರದೆತ್ತರಕ್ಕೆ ಸವಾಲಾದ ಮರದ
ನೆರಳು ನನ್ನಾವರಿಸಿ
ನನ್ನ ಇರುವಿಕೆ ಬಯಲಾಗಿಸದೆ
ಭ್ರಮೆಯಾಗಿಸಿದಂತೆಲ್ಲ ಸಶಕ್ತನಾಗಿ ಕೂಗಿದವನು.

ಹಾಗಾದರೆ ನಾ ಇರುವುದು ಎಲ್ಲಿ
ನನ್ನಿಂದ ನನಗೆ , ನನ್ನಿಂದ ಜಗಕೆ….?
ಪ್ರಶ್ನೆಗಳ ಸುರಿಮಳೆ ; ಮಂಪರು
ಹಿರಿಮರ ವರವೋ… ಶಾಪವೋ… ನನಗೆ ?

ನಾನು ಅದೇ ಮರದ ಬೀಜ
ಪುಟಿದದ್ದು ಅದೇ ಮಣ್ಣು – ನಿರಲ್ಲಿ
ಹಿರಿಮರದ ಅಘಾದತೆಯ ಅಹಮಿಕೆಗೋ
ನನ್ಮದೆ ಬೇರಿಳಿಸುವ ತೊಡಕಿಗೋ… ಎಲ್ಲೋ ನಾನೆಲ್ಲಿ.

ಅರೆ!!!… ನಾನೆಲ್ಲಿ
ಹುಡುಕುತ್ತಾ ಹೋದಂತೆ
ನನಗೇ ನಾ ಸಿಗುತ್ತಿಲ್ಲ.


11 thoughts on “ನಾಗಜಯ. ಗಂಗಾವತಿ ಕವಿತೆ-ಅಸ್ತಿತ್ವ

  1. ಹಿರಿದಾದ ಮರದ ನೆರಳು ನೆನೆದು,
    ತಮ್ಮ ಅಸ್ತಿತ್ವವೆ ತಮ್ಮನ್ನು ಹೆಮ್ಮರವಾಗಿ ಬೆಳೆಯತೊಡಗಿದೆ.
    ತಾವು ಪ್ರಸ್ತುತ ಇತರರಿಗೆ ನೆರಳು ನೀಡಿದ್ದೀರಿ ಕೂಡ.
    ಒಂದು ಉತ್ತಮ ಕವಿತೆ ನೀಡಿದ್ದೀರಿ. ಅಭಿನಂದನೆಗಳು

  2. ಅರ್ಥಗರ್ಭಿತ ಕವನ ಚನ್ನಾಗಿದೆ ಓದಿಸಿದ ಸಂಗಾತಿ ಬಳಗಕ್ಕೆ ಧನ್ಯವಾದ

    1. ಬದುಕು ಇರುವುದೆ ಹೀಗೆ
      ಹುಡುಕಾಟ….

Leave a Reply

Back To Top