ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ನಿನ್ನ ಸ್ನೇಹ ನೂರ್ ನೂರು ವಜ್ರದಂತೆ
ತಿದ್ದಿ ತೀಡುವ ಭಾವ ಬರಹ ಸುಗಂಧದಂತೆ
ಸ್ನೇಹಕ್ಕೆ ಬಣ್ಣ ಇಲ್ಲವೆಂದು ಹೇಳುವೆ ಏಕೆ
ಎಲ್ಲ ರಂಗಿಗೂ ಮೀರಿದ ಶುಭ್ರ ಬಣ್ಣದಂತೆ
ಕೃಷ್ಣ ಸುಧಾಮರ ಸ್ನೇಹದಲ್ಲಿ ಭೇದವಿತ್ತೆ
ಮನಸ್ಸುಗಳು ಪ್ರತಿಬಿಂಬಿಸುವ ದರ್ಪಣದಂತೆ
ಸೋಲು ಗೆಲುವಿನಲ್ಲೂ ಬಿಡದ ನಂಟು
ಸಮಯ ಉರುಳಿ ಪಕ್ವತೆ ಮಾಗಿದಂತೆ
ನಿಷ್ಕಲ್ಮಶ ಬಾಂಧವ್ಯ ಇದೆ ಇರಬೇಕು ‘ಮಾಜಾ’
ನಿಲುವಿಗೆ ನಿಲುಕದ ಅಗೋಚರ ಬಲದಂತೆ
ಮಾಜಾನ್ ಮಸ್ಕಿ
ಉತ್ತಮ
Super