ಮಹಾತ್ಮ-ಅರುಣಾರಾವ್-ಮಹಾತ್ಮ

ಮಕ್ಕಳ ಕವಿತೆ

ಮಹಾತ್ಮ.

ಅರುಣಾರಾವ್

ಗಾಂಧಿ ಇವನು ಕೋಲು ಹಿಡಿದು
ನಡೆಯತೊಡಗೆ ಸರಸರ
ಸೂರ್ಯ ಮುಳುಗನೆನ್ನುವಂತ
ದೇಶ ಕೂಡ ಗಡಗಡ

ಶಾಂತಿದಾತ ಸತ್ಯವಂತ
ಮಾತಿವನದು ಹರಿತಭರಿತ
ಪ್ರೀತಿ ಕರುಣೆಯಲಿವ ಸಂತ
ಅಹಿಂಸೆಯೊಂದೆ ಇವನ ಮಂತ್ರ

ರೈಲಿನಿಂದ ಇವನ ಹೊರಗೆ
ದಬ್ಬಿದೊಬ್ಬ ಬಿಳಿಯನು
ಆಕ್ಷಣವೆ ಗಾಂಧಿ ತೊಟ್ಟ
ದೃಢತೆಯಿಂದ ಪಣವನು

ಹಿಡಿದ ಹಠವ ಮೆರೆವ ಛಲವ
ಇವನಿಗಿವನೆ ಸಾಟಿಯು
ಬಿಳಿಯರೆಲ್ಲ ಬೆಚ್ಚುವಂತ
ದಟ್ಟಿಯುಟ್ಟ ವೀರನು

ದಂಡಿ ದೇಶ ಬಿಟ್ಟು ತೊಲಗಿ
ಸ್ವದೇಶಿಗಳ ಚಳುವಳಿ
ದೇಶಕಾಗಿ ತಂದಿತದುವೆ
ಬಿಡುಗಡೆಯ ಬಳುವಳಿ

ರಾಷ್ರ್ಟಪಿತನು ಗಾಂಧಿತಾತ
ಸರಳತೆಯೆ ಇವನ ಮತ
ಭಾರತ ನವ ಜನ್ಮದಾರಂಭದಿಂದ
ಮಹಾತ್ಮನೆನಿಸಿದವನು ಈತ


3 thoughts on “ಮಹಾತ್ಮ-ಅರುಣಾರಾವ್-ಮಹಾತ್ಮ

  1. ಮಹಾತ್ಮ ಪ್ರತಿಪಾದಿಸಿದ ಶಾಂತಿ , ಅಹಿಂಸೆ, ಸಹಬಾಳ್ವೆಯಂತಹ ತತ್ವ ಸಿದ್ಧಾಂತಗಳು ಅಷ್ಟೇಕೆ ಪ್ರತಿಮೆಗಳನ್ನೂ ದ್ವಂಸ ಮಾಡ ಹೊರಟ ಇಂದಿನ ಹಿಂಸಾತ್ಮಕ ಸಾಮಾಜಿಕ ಸಂದರ್ಭದಲ್ಲಿ ಓರ್ವ ಶಿಕ್ಷಕಿಯಾಗಿ ಇಂತಹ ಕವಿತೆಯನ್ನು ರಚಿಸಿರುವುದು ಸ್ತುತ್ಯಾರ್ಹ…..ಅಭಿನಂದನೆಗಳು ನಿಮಗೆ.

  2. ಅರುಣಾರಾವ್ ಮೇಡಂ. ಹುತಾತ್ಮ ನಾದ ‘ಮಹಾತ್ಮನ’ ಸ್ಮರಣಾoಜಲಿ ಯಂತಿದೆ, ತಮ್ಮ ಮಕ್ಕಳಕವಿತೆ. ಅಭಿನಂದನೆಗಳು..

Leave a Reply

Back To Top