ಲಲಿತಾ ಪ್ರಭು ಅಂಗಡಿ ಕವಿತೆ-ಮೌನದ ಮಾತು

ಕಾವ್ಯ ಸಂಗಾತಿ

ಮೌನದ ಮಾತು

ಲಲಿತಾ ಪ್ರಭು ಅಂಗಡಿ

ಮೌನದಲಿ ಮಾತು
ಮಾತಿನ ಪೆಟ್ಟು ತಿಂದುಟ್ಟು
ಮಾಡಿ ತೋರಿಸ್ಯಾಳ ಮೌನದಿ ಛಲವಿಟ್ಟು
ಆಡುವ ಮಾತಿನ ಕಲ್ಲೇಟು
ಎದೆಯೊಳಗ ನಾಟ್ಯಾವ ಚೂರಿಇಟ್ಟು
ಕಂಬನಿಯ ಬರಿಸ್ಯಾವ ಹರಿಬಿಟ್ಟು
ಮೌನದಿ ಸಹಿಸ್ಯಾಳ ಎಲ್ಲಾನೂ ಒಟ್ಟು

i

ಹೆಣ್ಣಿನ ಜನುಮಕ ಮಾತಿನ ಹರ್ಲಿ
ಎದಿರಸಿ ಜೀಕಬೇಕ ಜೀವನ ಜೋಕಾಲಿ
ಕುಂತ್ರ ನಿಂತ್ರ ಮಾತಿನಪೆಟ್ಟು
ಸೆಟೆದು ನಿಂತ್ರ ಹೆಮ್ಮಾರಿಪಟ್ಟ
ಆದರೂ ಬಿಟ್ಟಲ್ಲ ಹಟ ತೊಟ್ಟು
ಹದುಮಿಟ್ಟರೂ ಕೇಳಲೊಲ್ಲದು ಮನಸು
ಪುಟಿದೇಳುವ ಅಂತರಂಗದ ಕನಸ
ಮೌನದಿ ಸಾಧಿಸೋ ಹರುಷ
ಚಿಗುರಿಮಾತಾಡ್ತಾವ ಹೊಂಗನಸ
ಧೈರ್ಯ ತುಂಬತಾವ ಒಳಮನಸ
ಆದದ್ಧೆಲ್ಲವ ಮರೆಸಿ
ಮಂದಹಾಸ ಬೀರುವ ಕಲೆ ಹರಸಿ
ಕೈಚಾಚಿ ತಬತಾವ ತಲೆ ನೇವರಸಿ
ಸಾಧಿಸೋ ಸ್ಪೂರ್ತಿಯ ದಾರಿ ತೋರಿಸಿ
ಮೌನದಿ ಸಾಧಿಸ್ಯಾಳ ಘನತೆ ಹೆಚ್ಚಿಸಿ.


Leave a Reply

Back To Top