ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಹೃದಯ ರಂಗೋಲಿ ಅಳಿಸುತಿದೆ..

ಣ್ಣಿನ ರೆಪ್ಪೆಗಳ ಜೋಕಾಲಿಯಲ್ಲಿ ಪ್ರೀತಿ ಜೋಡಿಸಿದ್ದ ಕನಸಿನ ತಂತಿಯನ್ನು ಮುರಿದುಬಿಟ್ಟೆ. ಇದೆಂಥ ವಿಧಿಯಾಟವೋ ಏನೋ, ದೀಪ ನಲಿಯುತ್ತಿದೆಯಾದರೂ, ಬತ್ತಿ ಅಳುತ್ತಿದೆ. ಎಲ್ಲಿ ಹೋದರೂ, ಏನು ಹಾಡಿದರೂ, ಎಷ್ಟು ಅಳುತ್ತಿದ್ದರೂ, ನೆಮ್ಮದಿಯಂತೂ ಇಲ್ಲ..
ಖೇಲ್ ಯೆ ಕೈಸಾ ರೇ ಕೈಸಾ ರೇ ಸಾಥಿ
ದಿಯಾ ತೋ ಝೂಮೇ ಹೆ
ರೋಯೆ ಹೆ ಬಾತಿ
ಕಹಿ ಭಿ‌ ಜಾಯೆರೆ
ರೋಯೆ ಯಾ ಗಾಯೆ ರೆ
ಚೈನ್ ನಾ ಪಾಯೆ ರೆ ಹಿಯಾ..

ಹೃದಯರಂಗೋಲಿ ಅಳಿಸುತಿದೆ ಇಂದು
ಮನದಲಿ ಅರಿಯದ ನೋವೊಂದು ತಂದು..

ಆಹಾ ನಿನ್ನ ಪ್ರೀತಿಯಿದೇನೋ..
ಓ ಮೋಜುಗಾರನೇ, ನಿನ್ನ ಬಣ್ಣದೊಂದಿಗೇ ಬೆರೆತುಹೋಗಿದೆಯಲ್ಲ ನನ್ನ ಮನಸ್ಸಿನ ಬಣ್ಣ! ಹೇ ಮೋಸಗಾರನೇ, ನನ್ನೊಳಗಣ ಈ ಅಗ್ನಿಯ ದಹಿಸುವ ಜಲ ಇನ್ನಾವುದೂ ಕಾಣುತ್ತಿಲ್ಲ ನಿನ್ನ ಹೊರತು..
ಛಲಿಯಾರೇ ನಾ ಬುಝೆ ಹೆ
ಕಿಸೀ ಜಲ್ ಸೆ ಯೆ ಜಲನ್
ರಂಗೀಲಾರೆ ತೇರೆ ರಂಗ್ ಮೆ
ಯೂ ರಂಗಾ ಹೆ ಮೇರಾ ಮನ್..

ನನ್ನ ಪಾಡಿಗೆ ನಾನಿದ್ದೆನಲ್ಲ, ಹಾಯಾಗಿ. ನೀನು ಬಂದ ಮೇಲೆ ಬದುಕು‌ ಇನ್ನಷ್ಟು ಸುಂದರವಾಯಿತೆಂದುಕೊಂಡಿದ್ದೆ. ಆದರೆ ನಮ್ಮ ಹೃದಯವೀಣೆಯ ಹಾಡಿನ ಶೃತಿ ಎಲ್ಲಿ ತಪ್ಪಿತೋ ಅರಿವಾಗಲೇ ಇಲ್ಲ..
ಬರುವ ತನಕ ನೀನು
ಅರಳಲಿಲ್ಲ ಆಸೆ
ಒಲುಮೆಯನು ಮೀಟಿದೆ
ಕನಸುಗಳ ತುಂಬಿದೆ
ಮಿಡಿದ ಹಾಡಲಿ
ಸ್ವರ ತಪ್ಪು ಶೃತಿ ತಪ್ಪು…

ದುಃಖವೇ ನನ್ನ ಪಾಲಿನ ಮಧುಮಗ, ವಿರಹವೇ ಪಲ್ಲಕ್ಕಿ, ಕಣ್ಣೀರೇ ಮದುವೆ ಧಾರೆ ಸೀರೆ, ನಿಟ್ಟುಸಿರೇ ಕುಪ್ಪಸ, ಬೆಂಕಿಯನ್ನೇ ನೀರೆಂಬಂತೆ ಕುಡಿಯುತ್ತಿರುವ ನಾನೊಂದು ಹುಚ್ಚು ಹೆಣ್ಣು, ನಾನು ನೋವಿನ ಮಹಾರಾಣಿಯೇ ಸರಿ, ಈ ಹೃದಯ ದಹಿಸುತ್ತಿದೆ, ಈ ಲೋಕವೆಲ್ಲಾ ವಂಚಿಸುತ್ತಿದೆ ಆದರೂ ಈ ಉಸಿರು ಯಾಕೋ ಮಿಡುಕುತ್ತಲೇ ಇದೆಯಲ್ಲ…
ದುಃಖ್ ಮೇರಾ ದುಲ್ಹಾ ಹೆ ಬಿರಹಾ ಹೆ ಡೋಲಿ
ಆಸೂ ಕೀ ಸಾಡೀ ಹೆ ಆಹೋಕಿ ಛೋಲಿ
ಆಗ್ ಮೆ ಪೂಯೂ ರೇ ಜೈಸೆ ಹೋ ಪಾನಿ
ನಾರಿ ದಿವಾನೀ ಹೂ ಪೀಡಾ ಕಿ ರಾನಿ
ಮನ್ ವಾ ಯೆ ಜಲೆರೆ ಜಗ್ ಸಾರಾ ಛಲೆರೆ
ಸಾಸ್ ಕ್ಯೂ‌ ಚಲೆ ರೆ ಹಿಯಾ…

ಗೊತ್ತೇ ಇರಲಿಲ್ಲ,ಈ ಪ್ರೀತಿಯೆಂಬ ಬಲೆಯಲ್ಲಿ ಸಿಕ್ಕಿಕೊಂಡರೆ ಬಿಡಿಸಿಕೊಳ್ಳಲಾಗುವುದಿಲ್ಲವೆಂದು. ನೆನಪುಗಳ ಬಂಧನದಲ್ಲಿ ಸಿಕ್ಕಿ ನರಳುತ್ತಿರುವಾಗ ಇದರಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ ಇಂದು. ನೀ ಬಂದು ಸಂತೈಸುವೆ ಎಂಬುದೆಲ್ಲ ಬರೀ ಭ್ರಮೆಯಾಗಿ ಉಳಿಯಿತಲ್ಲ..
ಸೋತೆ ಪ್ರೀತಿ ಮಾಡಿ ಹೋಗಲೆಲ್ಲಿ ಓಡಿ
ನೆನಪುಗಳು ನೂರಿದೆ ಕೆಣಕುತಿದೆ ನನ್ನೆದೆ
ಒರೆಸೆ ಕಂಪನಿ ಎಲ್ಲಿ ನೀ ನೀನೆಲ್ಲಿ??

ನಿನ್ನ ಈ ಬಾಳದಾರಿಯನ್ನು ನಾನೇ ಕಷ್ಟಪಟ್ಟು ನಿರ್ಮಿಸಿ ಕೊಟ್ಟಿದ್ದೆನಲ್ಲ, ಆದರೂ ಯಾಕೆ ಹೀಗೆ ನಿನ್ನ ತೋಳಲ್ಲಿ ಬೆಸೆದಿದೆ ಇನ್ಯಾರದ್ದೋ ತೋಳು? ಕಣ್ಣಿನ ಭಾಷೆಗಳನ್ನು ಪರಸ್ಪರ ಅದೆಷ್ಟು ಚೆನ್ನಾಗಿ ಅರಿತಿದ್ದೆವಲ್ಲ, ಆದರೂ ಆ ಪರಿಮಳಭರಿತ ರಾತ್ರಿಗಳನ್ನು ನೀ ಮರೆತದ್ದಾದರೂ ಹೇಗೆ? ನನ್ನ ಮನೆ ಮಠಗಳನ್ನೆಲ್ಲಾ ತೊರೆದು ಬಂದೆ, ನನ್ನ ಕನಸುಗಳನ್ನೆಲ್ಲಾ ತುಳಿದು ಬಂದೆ, ಆದರೂ ನೀನೇಕೆ ಬೆನ್ನು ತೋರಿ ದೂರಾಗಿಹೋದೆ, ಆಹಾ ನಿನ್ನ ಪ್ರೇಮವೇ..
ಕೈಸೆ ತೂ ಭೂಲಾ ವೋ ಫೂಲೋಂಸಿ ರಾತೆ
ಸಮಝೆ ಜಬ್ ಆಖೋನೆ ಆಖೋಂಕಿ ಬಾತೆ
ಗಾವ್ ಘರ್ ಛೂಟಾ ರೇ
ಸಪ್ನಾ ಹರ್ ಟೂಟಾ ರೇ
ಫಿರ್ ಭಿ ತೂ ರೂಠಾ ರೇ ಪಿಯಾ
ವಾಹ್ ರೇ ಪ್ಯಾರ್ ವಾಹ್ ರೇ ವಾ..


ಅಮೃತಾ ಮೆಹೆಂದಳೆ

003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top