ಎ. ಹೇಮಗಂಗಾರವರ ಹನಿಗವನಗಳು

ಹನಿಗವನಗಳು

ಎ. ಹೇಮಗಂಗಾ

White pearls necklace on black background

…………..ಬೆಳಕು………….

ನೀನಿರದ ಈ ಬಾಳಲ್ಲಿ
ಏಕಾಂಗಿ ನಾನಾದರೂ
ಸರಿದಾರಿಯಲ್ಲಿ ನಾ
ನಡೆಯಲು ದೊಂದಿಯಂತೆ
ನಿನ್ನ ನೆನಪಿನ ಬೆಳಕು

……….. ಮುತ್ತಿನ ಮಾಲೆ……….

ಹೊನ್ನಿನ ಮುತ್ತಿನ
ಹಾರವೇನೂ ಬೇಡ
ಎನಗೆ ಗೆಳೆಯಾ…..
ನೀನೊತ್ತಿದ ಅಗಣಿತ
ಮುತ್ತಿನ ಮಾಲೆಯೇ
ಸಾಕೀ ಕೊರಳಿಗೆ ಇನಿಯಾ

………….ಕೊಹಿನೂರು………..
ನಲ್ಲ ,

ನಿನ್ನೊಲುಮೆ ಕಡಲಲ್ಲಿ
ಮುಳುಗಿರುವ ಎನಗೆ
ಮರೆತೇ ಹೋಗಿದೆ
ನನ್ನ ತವರೂರು
ಪ್ರೀತಿಯಲ್ಲಿ ಅಂದೂ
ಇಂದೂ ಎಂದೂ
ನೀನೇ ಅಲ್ಲವೇ
ನನ್ನ ಕೊಹಿನೂರು ?

……….. ಸಾಂಗತ್ಯ……….

ನಾನಿರುವೆ ನಿನ್ನ
ಜೊತೆಗೆ ಚಿಂತೆಯಲ್ಲೂ
ಕೊರಡಾಗಿ ನೀ
ಮಲಗುವ ಚಿತೆಯಲ್ಲೂ

…………… ಸತ್ಯ…………..

ಪತ್ನಿ ಪ್ರೇಯಸಿಯೂ
ಆಗಬಲ್ಲಳು
ಪತಿ ಪ್ರಿಯಕರನಾದರೆ
ಮಾತ್ರ , ಇದು ಸತ್ಯ


                   ಎ. ಹೇಮಗಂಗಾ


Leave a Reply

Back To Top