ಕಾವ್ಯ ಸಂಗಾತಿ
ವಿದ್ಯಾಶ್ರೀ ಅಡೂರ್
ಮನನವಾಗದ ಮಾನಿನಿ
ತನ್ನ ಸವೆಯುತ ಗಂಧ ಸೂಸುವ ಮಂದಹಾಸದ ಮೂರುತಿ
ಕುಂಚವಿಲ್ಲದೆ ಬಣ್ಣ ಬೆರೆಸುವ ಅಚ್ಚರಿಯದೆ ಆಕೃತಿ
ನೂರು ಕನಸಿನ ಹೂಗಳೆಲ್ಲವ ಒಂದೆ ದಾರದಿ ಪೋಣಿಸಿ
ಹಲವು ಸುಮಗಳ ಜತೆಗೆ ಸೇರಿಸಿ ಒಂದೆ ಗುಚ್ಛವ ಮೆರೆಯಿಸಿ
ಹನನ ನಿತ್ಯದ ಸಹಿಸಿಕೊಳ್ಳುತ ಜನನ ಹೊಸ ಹೊಸ ವಿಷಯವು
ಮನನವಾಗದ ಮಾನಿನಿಯು ಅವಳು ಹವನಕೆರಗುವ ಹಾತೆಯು
ನೋವ ಕೊಡುವ ನಿನ್ನೆ ಪುಟಗಳು ಕಸುವನೊದಗಿಸಿ ನಾಳೆಗೆ
ಮಾಣಿಕ್ಯದಂತಿಹ ಭವಿತ ಪುಟಕೆ ಅದುವೆ ಹೊಳೆವ ದೀವಿಗೆ
ವಿದ್ಯಾಶ್ರೀ ಅಡೂರ್