ಬರುವುದೇ ಆ ದಿನ??
ನಾಗರತ್ನ ಎಂ ಜಿ
ಅಮ್ಮ..
ನಾನೇಕೆ ಹೋಗಲಾರೆ
ಒಬ್ಬಳೇ ಹೊರಗೆ
ಕತ್ತಲಾದರೇನು
ಇಲ್ಲವೇ ದೀಪ ಎಲ್ಲೆಡೆ…?
ನನಗೂ ಆಸೆ ಮಗಳೇ
ನೀ ಒಬ್ಬಳೇ ಹೋಗಲು
ಸ್ವಚ್ಛoದ ಗಾಳಿಯಲಿ
ಸ್ವಂತತ್ರವಾಗಿ ವಿಹರಿಸಲು
ಬೆಳಕು ಇರುಳೆನ್ನದೆ
ಮನ ಬಂದಂತೆ
ಓಡಾಡಲು
ಆದರೆ…!!!
ಬಿಡುವರೇ ಮೃಗಗಳು
ನಿನ್ನಂತೆ ನಿನ್ನನು…?
ನಮಗೇಕೆ ಬೇಕು
ಅವಳ ಉಸಾಬರಿ
ಹೆಣ್ಣಾದರೇನು
ನಮ್ಮಂತೆ ಅವಳೂ
ತಾಯಿಯೊಬ್ಬಳ ಕುಡಿ
ನಮಗೂ ಇಲ್ಲವೇ
ಮಗಳು ತಂಗಿ ??
ಅವಳ ಪಾಡಿಗೆ
ಅವಳನ್ನು ಬಿಟ್ಟುಬಿಡಿ
ಹೀಗಾಗಬಹುದೇ ಮನಸ್ಥಿತಿ
ಎಂದಿಗಾದರೂ ಒಮ್ಮೆ..?
ಅಂದಿಗೆ ಬಿಚ್ಚುವೆ
ಈ ಕಟ್ಟು ಪಾಡುಗಳ
ಮಗಳೇ
ಕಾಯುತ್ತಿರು ಆ ಸುದಿನ
ಬರುವುದೆoದಿಗೆ…??
ಬರಬಹುದು ಇನ್ನೊಂದು
ಜನುಮಕ್ಕೆ..
ನಾಗರತ್ನ ಎಂ ಜಿ
Nice