ಮಹಿಳಾ ದಿನದ ವಿಶೇಷ

ಮಹಿಳೆ

ಮಧುರಾ ಮೂರ್ತಿ

ಕನಸುಗಳ ಬುತ್ತಿಯ ಕಟ್ಟಿಕೊಂಡು
ಸಂಗಾತಿಯ ಜೊತೆ ಹೆಜ್ಜೆ ಹಾಕುತ
ಬದುಕಿನ ರಥಕೆ ಹೆಗಲಾಗಿ ನಿಂತು
ಶ್ರಮದಲ್ಲೇ ಸುಖ ಕಾಣುವವಳು

ಎಲ್ಲ ಕ್ಷೇತ್ರಗಳಲ್ಲೂ ಸರಿಸಮನಾಗಿ
ತನ್ನಿರುವಿಕೆಯ ಗುರುತಿಸುವಂತೆ
ಅದೆಷ್ಟೇ ಎತ್ತರಕೆ ಏರಿದರೂ ಇಂದಿಗೂ
ದೌರ್ಜನ್ಯಕ್ಕೆ ಒಳಗಾಗುತ್ತಿರುವವಳು

ಸಮಾನತೆಗಾಗಿ ಹೋರಾಡುತ್ತಲೇ
ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು
ನಿತ್ಯ ಏಳು-ಬೀಳುಗಳನೆದುರಿಸಿಯೂ
ಆಶಾಭಾವನೆ ಬಿಡದ ಛಲದವಳು

ಗಂಡ-ಮಕ್ಕಳು ಮನೆಯೆಂಬ ಮೋಹದಿ
ಕನಸುಗಳೆಲ್ಲವೂ ನುಚ್ಚುನೂರಾದರೂ
ಪ್ರೀತಿ ಮಮತೆ ತ್ಯಾಗದಿಂದ ಭಾವುಕದಿ
ಸ್ವಾರ್ಥಕ್ಕೆ ಬಲಿಯಾಗುತ್ತಿರುವವಳು

ನಡುರಾತ್ರಿ ಒಂಟಿಯಾಗಿ ನಡೆದರೂ
ನಿರ್ಭೀತಿಯಿಂದ ಹೆಜ್ಜೆ ಹಾಕುವಂತೆ
ಬದಲಾವಣೆ ಬಯಸುತ ಸಮಾಜದಿ
ಸುಸಂಸ್ಕೃತಿಯ ನಿರೀಕ್ಷಿಸುತಿರುವವಳು


  • ಮಧುರಾ ಮೂರ್ತಿ

Leave a Reply

Back To Top