ಮಹಿಳಾ ದಿನದ ವಿಶೇಷ

ಹೆಣ್ಣು ಬದುಕಿನ ಶಕ್ತಿ

ಮಲ್ಲಿಕಾ ಜೆ. ರೈ ಪುತ್ತೂರು

ಅಲ್ಲೊಂದು ಹೂವು ಅರಳಿತ್ತು
ಅಂತಿಂಥ ಹೂವಲ್ಲ ಚೆಲುವು ತುಂಬಿತ್ತು
ರಾಯರು ಬಂದರು ಮೆಟ್ಟಿಲ ಹತ್ತುತ
ಸಡಗರದ ಮನದೊಳಗೆ ರಂಗನು ಚೆಲ್ಲುತ //

ಅವರಿವರ ಮಾತುಗಳು ಹೊನ್ನ ಶೂಲವಾಗುತ
ಘಾಸಿಗೊಳಿಸಿರಲು ಮನ ಮೌನವಾಗುತ
ಉಕ್ಕಿ ಬಂದ ಹರೆಯ ಮತ್ತೆ ಗೆಲುವಾಗುತ
ಬಾಳಿನಲಿ ವರವಾಗಿ ಬಂತೀಗ ಮೆಲುಕಾಕುತ //

ಕಷ್ಟಗಳೇ ಬಂದರೂ ಇಷ್ಟವನ್ನು ಅರಿತೋ
ಅರಿಯದೆಯೇ ಒಡನಾಡಿಯಾದ ಮಾತೆ
ಸಾಕ್ಷಾತ್ ಸಿರಿಯೇ ಆದರೂ ಎಲ್ಲವೂ ಅವಳದೇ ರೂಪ
ನದಿಯಾಗಿ ಸುಧೆಯಾಗಿ ಪ್ರಕೃತಿಯೇ ಆಗಿ
ಹೆಣ್ಣಾಗಿ ಕಣ್ಣಾಗಿ ಬಾಳ ಬೆಳಗುವ ಜ್ಯೋತಿಯಾಗಿ
ಪ್ರತಿ ಉಸಿರ ಉಸಿರಲ್ಲಿ ಜತೆಯಾಗಿ ನಿಂತು
ಹೆಗಲ ಭಾರವ ಹೊತ್ತು ಇಳಿಸುವ ಮಾತೆ
ಆಂತರ್ಯದೊಳ ಹೊಕ್ಕು ನೋಡಿದರೆ ವಿಸ್ಮಯ
ಆಕೆಯ ಅರ್ಥೈಸುವ ನೋಟದ ಆ ಪರಿಯ
ಬಲ್ಲವರು ಆಗುವರು ಜಗ ಮೆಚ್ಚಿದ ಗೆಣೆಯ//


ಮಲ್ಲಿಕಾ ಜೆ. ರೈ ಪುತ್ತೂರು

Leave a Reply

Back To Top