ಕಾವ್ಯಸಂಗಾತಿ
ತನಗಗಳು
ನಿಂಗಮ್ಮ ಭಾವಿಕಟ್ಟಿ
1
ಹೌದು ಅಂತರಬೇಕು
ದೂರ ಹತ್ರವಾಗಲು
ಹತ್ರ ಹಿತವಾಗಲು
ಹಿತ ಚಿರವಾಗಲು
2
ಮೌನ ಬಂಗಾರ ಸರಿ
ಅದು ಅಪಾಯವೇ ರೀ
ಬೆಳ್ಳಿಯೇ ಇರ್ಲಿ ಬಿಡಿ
ಹಗುರಾಗ್ಬೋದು ಆಡಿ
3
ಬ್ಯೂಸಿ ಇದ್ದರೆ ಚೊಲೋ
ಮನ್ಸಾಳ್ ಮಾಡೋ ಮಾತು
ಮನೆ ಹಾಳು ಯೋಚನೆ
ಬರಲ್ಲ, ಎಲ್ಲರೂ ಚೆಂದ.
4
ಮರೆವುದ ನೆನೆದು
ನೆನೆವುದ ಮರೆವ
ಮನಸೆಂಬ ಮರ್ಕಟ
ಅದು ಆಡಿದ್ದೇ ಆಟ
5
ಸುಲಭದಿ ಕೊಡೋದ
ಸುಲಭದಿ ಕೊಡಲ್ಲ
ಉದಾಹರಣೆ ಬೇಕೇ?
ದಯವಿಟ್ಟು ಥ್ಯಾಂಕ್ ಯು