ಕಾವ್ಯ ಸಂಗಾತಿ
ಮನಮೋಹನ ಶ್ವಾನ ಸಿಂಬ
ಮಾಲಾ ಚೆಲುವನಹಳ್ಳಿ
ಧರಿಸಿದವರ್ಯಾರು
ನಿನಗೀ ಶ್ವೇತ ವಸ್ತ್ರವ
ಮನಸ್ಸು ಹೃದಯಗಳಂತೆ
ಪರಿಶುದ್ಧ ಮೋಹಕ ತನುವ
ನಿನಗ್ಯಾರೂ ನೀಡರು
ಬೆಚ್ಚನೆಯ ಹಾಸೊದಿಕೆ
ಅಚ್ಚನೆಯ ತೊಗಲಿರಲು
ಋತುಮಾನಗಳಿಗೂ ದಿಗಿಲು
ತಾರೆಗಳ ಮೀರಿಸುವ
ಹೊಳಪು ಕಂಗಳು ನಿನವು
ಕಿಂಚಿತ್ತೂ ಕಲ್ಮಶವಿರದ
ಕದ್ದಿoಗಳ ನಾಚಿಸುವ ನಿಲುವು
ಚೋಟು ಬಾಲವನೆ
ಚಾಟಿಯಂತೆ ಬೀಸುತಲಿ
ಮೋಟು ಪಾದಗಳಲಿ
ಪುಟ್ಟೆಜ್ಜೆಗಳ ಹಾಕುತಿರುವೆ
ಮನವ ಸೂರೆಗೊಂಡ
ಮುದ್ದು ಮೂತಿಯ
ಮೋಹಕ ಚೆಲುವಿನ
ಅಂದದ ಶ್ವಾನ ಮರಿ ನೀ
ಸಿಂಬ ಹೆಸರಿನ ಹುಂಬ ನೀನು
ಚಂಗನ್ಹೆಗರಿ ಕದ್ದು ಓಡುವೆ
ಅಶ್ವದಂತೆ ವೇಗ ಹೊಂದಿಹೆ
ವಿಶ್ವವೆಲ್ಲಾ ಮೆಚ್ಚೋ ಗೆಳೆಯನು
ಬಯಸದವರ್ಯಾರಿಹರು ನಿನ್ನ
ಪ್ರೀತಿಸುವ ಹೃದಯ
ನಿನಗಿಂತ ಬೇರಿಲ್ಲ
ಅನ್ನವಿಟ್ಟ ದಣಿಯ ಬೆನ್ನು ಬಿಡದವ
ಪದ್ಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ