ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಅವಳ ಪುಟ್ಟ ಲೋಕವದು…

ಈ ಪ್ರಕೃತಿಯ ಸೊಬಗೆಲ್ಲ ಅದರ ಸ್ವಚ್ಛಂದತೆಯಲ್ಲೇ ಇದೆಯಲ್ಲವಾ? ಹಕ್ಕಿಗೆ ಹಾರುವ ಸ್ವಾತಂತ್ರ್ಯ, ಗಾಳಿಗೆ ಓಲಾಡುವ ಸ್ವಾತಂತ್ರ್ಯ, ಹೂವಿಗೆ ಪರಿಮಳ ಸೂಸುವ ಸ್ವಾತಂತ್ರ್ಯ.. ಅವೆಲ್ಲ ಇಲ್ಲದಿದ್ದರೆ ಬರಡಲ್ಲವಾ? ಆ ಪ್ರಕೃತಿಯೇ ತಾನಾದ ಈ ಹೆಣ್ಣಿಗೂ ಇದೇ ಬೇಕಾಗಿರುವುದಲ್ಲವಾ?
ಹೆಣ್ಣೇ ನಿನಗೇನು ಬಂಧನಾ…
ಕುಹೂ ಕೋಗಿಲೆಯೇ
ಬೀಸುವ ತಂಗಾಳಿಯೇ
ಹಾರಾಡೋ ಹಕ್ಕಿಗಳೇ
ಅರಳಿದ ಹೂವುಗಳೇ
ಹೇಳಿ ನಿಮಗೇನು ಬಂಧನ…

ಅವಳ ಆಸೆಗಳೇ ಹಾಗೆ, ಪುಟ್ಟ ಆಸೆಗಳು, ಪುಟ್ಟ ಹೃದಯದ ತುಂಬಾ..ಮುಗ್ಧ ಆಸೆಗಳು ತುಂಟಮನಸ್ಸಿನ ತುಂಬಾ. ಚಂದ್ರ ತಾರೆಯರ ಮುಟ್ಟುವ, ಆಕಾಶದಲ್ಲೆಲ್ಲಾ ಹಾರುವ ಆಸೆಗಳು..
ಮಸ್ತಿ ಭರೆ ಮನ್ ಕಿ
ಭೋಲೀ ಸಿ ಆಶಾ
ಚಂದ್ ತಾರೋಂಕೋ ಛೂನೇಕಿ ಆಶಾ
ಆಸಮಾನೋ ಮೆ ಉಡನೇ ಕಿ ಆಶಾ
ದಿಲ್ ಹೆ ಛೋಟಾ ಸಾ
ಛೋಟೀಸಿ ಆಶಾ…

ಹೆಣ್ಣು ಎಂದರೆ ಸೌಂದರ್ಯ, ಹೆಣ್ಣು ಎಂದರೆ ಮಾತೃತ್ವ, ಸಾಂಗತ್ಯ, ಕ್ಷಮಯಾಧರಿತ್ರಿ, ಜೀವನ್ಮುಖಿ, ಗಂಗಾಮಾಯಿ ಏನೆಲ್ಲಾ..ಅದೆಲ್ಲ ಆಗಬೇಕೆಂದರೆ ಅವಳಿಗಷ್ಟು ಹಿಡಿ ಸ್ವಾತಂತ್ರ್ಯ ಬೇಕು. ಬಂಧನದಾಚೆಯ ಮುಕ್ತಿ ಬೇಕು ಅಷ್ಟೇ. ಅದನ್ನವಳು ಪಡೆದರಷ್ಟೇ ಜಗತ್ತಿಗೆ ಬೆಳಕು.

ಜೀವ ಕೊಟ್ಟು ಜನ್ಮ ನೀಡುವಂಥ
ಆ ಚೇತನ ಹೆಣ್ಣಿನದು
ನೋವನ್ನೆಲ್ಲ ನೀಗಿ ಲಾಲಿ ಹಾಡೋ
ಆ ಮಮತೆಯು ಹೆಣ್ಣಿನದು..
ಹೆಣ್ಣಿನ ಆರು ಗುಣ
ಸಂಸಾರದ ಮೂಲ ಧನ
ಬಾಳದೋಣಿ ತೀರ ಸೇರಲು ಬೇಕು

ಹೆಣ್ಣಿನ ಜಾಣತನ..
ಹೆಣ್ಣು ಎಂದರೆ ಪಾಪ ಕಳೆಯುವ
ಪುಣ್ಯಗಂಗೆ ..

ಒಂದಷ್ಟು ಮುಕ್ತತೆ ಸಿಕ್ಕರೆ ಅವಳೇನೂ ಅನಾಹುತ ಮಾಡುವವಳಲ್ಲ. ಅವಳಿಗಿರುವುದೆಲ್ಲ ಪುಟ್ಟ ನಿರೀಕ್ಷೆಗಳು. ಭೂಮಿಯೊಡನೆ ಆಕಾಶ ಆಟವಾಡುವಂತೆ ತಾನೂ ಆಡಬೇಕು. ಕೋಗಿಲೆಯ ಇನಿದನಿಯಂತೆ ತಾನೂ ಹಾಡಬೇಕು. ಹೂ ಅರಳಿದ ಹಾಗೆ ತಾನೂ ಅರಳಬೇಕು. ಮೋಡವನ್ನೇ ಹೊದೆಯಬೇಕು. ಅವಳ ಹರೆಯದ ಕನಸುಗಳೇ ಹಾಗೆ. ಮಿಂಚಿನ ಹಾಗೆ ಸುಳಿಯಬೇಕು, ಹೂವ ಸುತ್ತುವ ದುಂಬಿಯ ಹಾಗೆ ನಲಿಯಬೇಕು, ಲೋಕವನ್ನೇ ತನ್ನ ಸೆರಗ ತುದಿಗೆ ಗಂಟು ಹಾಕಿಕೊಳ್ಳಬೇಕು…
ಕೋಯಲ್ ಕೀ ತರ್ಹಾ ಗಾನೆ ಕ ಅರ್ಮಾನ್
ಬಿಜಲೀ ಕೀ ತರ್ಹಾ ಮಚಲೂ ಯೆ ಅರ್ಮಾನ್
ಬಾದಲೋಂಕಿ ಮೆ ಓಢೂ ಚುನರಿಯಾ
ಝೂಮ್ ಜಾವೂ ಮೆ ಬನಕೆ ಬಾವರಿಯಾ
ಅಪ್ನಿ ಚೋಟಿ ಮೆ ಬಾಂಧ್ ಲೂ ದುನಿಯಾ..

ಇದೆಲ್ಲಕ್ಕಿಂತ ಮತ್ತೂ ಖುಷಿಯಾಗುವುದೇನು ಗೊತ್ತಾ ಅವಳಿಗೆ? ಎಲ್ಲ ವರ್ಣನೆಗಳನ್ನೂ ಮೀರಿದ ಆಧುನಿಕ, ವೀರ, ಸ್ವಾವಲಂಬಿ ನಾರಿಯಾಗಿ ಜಗತ್ತು ನೋಡುವುದು ಅವಳ ಮಹತ್ವಾಕಾಂಕ್ಷೆ.
ಪುಂಡರ ಊರಲಿ ಚಿರತೆಯ ಹಾಗಿರು
ನೀನು ಕಣ್ಬಿಟ್ಟೊಡೆ ಭೂಕಂಪವೇ ಎಲ್ಲಾ ಕಡೆ
ವೀರರ ಬೀಡಲಿ ವಿಜಯದ ಹಾಗಿರು
ನೀನು ನಗುತಿದ್ದೊಡೆ ಆನಂದವೆ ಎಲ್ಲ ಕಡೆ..

ಮದುವೆಯ ಮನೆಯಲಿ ವಧುವು ನೀನಾಗಿರು
ಎಂಬಂತೆ ತನ್ನ ಸಂಸ್ಕೃತಿ, ಸಭ್ಯತೆ, ಘನತೆಯ ಕಾಪಾಡುವ ಮುಗ್ಧ ನಾರಿಯಾಗಿಯೂ
ಹಾಳು ವರದಕ್ಷಿಣೆ ಬೇಕೆಂದರೆ ಹುಲಿಯಾಗಿರು
ಎಂಬ ಆಧುನಿಕ ಮನೋಭಾವವೂ ಅವಳಿಗೆ ಅಚ್ಚುಮೆಚ್ಚೇ.

ಬಡವರ ನಾಡಲಿ ನಗುವ ತಾಯಾಗಿರು ಎಂಬಂಥ ಮಮತೆ ಅವಳ ಸಹಜ ಗುಣವಾದರೂ
ಯಾರು ಏನೆಂದರೂ ಮಿತಿಮೀರದೆ ಎರಡೇ ಹೆರು ಎಂಬ ಪ್ರಜ್ಞೆಗೂ ಸಾಕ್ಷಿಯವಳು.
ಹೆಣ್ಣು ಮನೆಯ ಕಣ್ಣು ಎಂಬುದನ್ನು ಸಾಬೀತುಪಡಿಸುತ್ತಲೇ, ನಿನಗೆ ನೀನೇ ರಕ್ಷೆ ಎಂಬ ವಾಸ್ತವವನ್ನೂ ಅರಿತು, ಅದನ್ನೆದುರಿಸಲು ಸಜ್ಜಾದವಳು.

ಸಂಕೋಲೆಗಳ ಹಿಂದೆಯೂ ಸ್ವಚ್ಛಂದ ಅವಳು..
ನೋವಿನ ಎದುರಿಗೂ ಮುಗುಳ್ನಗೆಯವಳು..
ಕೆಸರಿಲ್ಲದವಳು, ಕೆಂಪು ಕಮಲವಾದವಳು..
ಹೆಸರಿಲ್ಲದವಳು, ಸಾವಿರ ಬಿರುದಾದವಳು..


ಅಮೃತಾ ಮೆಹೆಂದಳೆ

003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top