ಕಾವ್ಯಸಂಗಾತಿ
ಹಸಿರು-ಉಸಿರು
ಮಧುರಾ ಮೂರ್ತಿ
ಸ್ವಚ್ಚವಾಗಿಡು ಮನುಜ ಪರಿಸರವನು
ಹಚ್ಚಿಬಿಡು ಮನೆಗೊಂದು ಸಸಿಯನು
ಶುದ್ಧ ಗಾಳಿಯು ನಿನಗೆ ಮರಗಳಿಂದ
ರಕ್ಷಣೆಯು ಬಿರುಗಾಳಿ ಬಿರುಬಿಸಿಲಿನಿಂದ
ಬಳಲಿ ಬಂದವರಿಗೆ ನೆರಳ ನೀಡುತ
ಹಸಿದು ಬಂದವರಿಗೆ ಫಲಗಳ ನೀಡುತ
ನಿಸ್ವಾರ್ಥ ಸೇವೆಯನು ನೀಡುತಿಹುದು
ತ್ಯಾಗದಲಿ ಸುಖಕಂಡು ಬಾಳುತಿಹುದು
ಪ್ರಾಣಿ ಪಕ್ಷಿಗಳಿಗೆ ಆಶ್ರಯದ ತಾಣವಾಗಿ
ಅದೆಷ್ಟೋ ರೋಗಗಳಿಗೆ ಸಂಜೀವಿನಿಯಾಗಿ
ಉಸಿರಿಗೆ ಉಸಿರಾಗಿಹುದು ಈ ಕಾನನ
ನಿಸರ್ಗ ಚೆಲುವಿಗೆ ಸಾಕ್ಷಿಯಿದು ಅರಿಯೋಣ
ಒಣಗಿದ ಮರ ಉರುವಲಿಗೆ ನಿತ್ಯೋಪಕರಣಕೆ
ಚಿಗುರಿರಲು ಸ್ವರ್ಗವೀ ಹಸಿರು ಕಂಗಳಿಗೆ
ಅತಿವೃಷ್ಟಿ ಅನಾವೃಷ್ಟಿಯ ಸಮತೋಲನಕೆ
ಮಾಡೋಣ ಗಿಡ ನೆಡುವ ಆಂದೋಲನ
ಸೂಪರ್ ✍️✍️