ಚೈತನ್ಯಾ ಎನ್ ಭಟ್-ಚಿತ್ರಕಲೆಯ ಯುವಪ್ರತಿಭೆ

ಪ್ರತಿಭೆ

ಚೈತನ್ಯಾ ಎನ್ ಭಟ್-

ಚಿತ್ರಕಲೆಯ ಯುವಪ್ರತಿಭೆ

ಚೈತನ್ಯಾ ಎನ್ ಭಟ್

ಚೈತನ್ಯಾ ಎನ್ ಭಟ್

ನರಸಿಂಹಮೂರ್ತಿ ಭಟ್ ಮತ್ತು ಮಧುರಾ ಮೂರ್ತಿ(ಕವಯತ್ರಿ) ಇವರ ಮಗಳಾಗಿ ಜನಿಸಿ ಬೆಂಗಳೂರಿನ ವಿಡಿಯಾ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಒಂಬತ್ತನೇ ತರಗತಿ ಮುಗಿಸಿ ಈಗ ಹತ್ತನೇ ತರಗತಿ ಓದುತ್ತಿರುವ ಚೈತನ್ಯಾ ಭಟ್ ಇವಳು ಸೌಮ್ಯ ಸ್ವಭಾವದವಳು. ಓದುವುದರಲ್ಲೂ ಮೊದಲು. ತನ್ನ ಶಾಲೆಯ ಪುಸ್ತಕಗಳಲ್ಲದೇ ಬೇರೆ ಬೇರೆ ಪುಸ್ತಕಗಳನ್ನ ತರಿಸಿಕೊಂಡು ಸಮಯ ಸಿಕ್ಕಾಗೆಲ್ಲ ಓದುವುದು ಇವಳ ಹವ್ಯಾಸ. ತನ್ನ ಐದು, ಆರನೇ ತರಗತಿಯಲ್ಲಿ ತನ್ನದೇ ಶಾಲೆಯ ಚಿತ್ರಕಲಾ ಶಿಕ್ಷಕರಾದ ಎಸ್ ಸುರೇಶ್  ಇವರಲ್ಲಿ ಎರಡು ವರ್ಷ ಡ್ರಾಯಿಂಗ್ ಕ್ಲಾಸ್(ವಾಟರ್ ಕಲರ್)ಗೆ, ಎರಡು ತಿಂಗಳು ಪೇಂಟಿಂಗ್ ಕ್ಲಾಸ್ ಗೆ ಹೋಗಿದ್ದಳು. ನಂತರ ಏಳನೇ ತರಗತಿಯಲ್ಲಿ ಲಾಕ್ಡೌನ್ ಆದ ಸಂದರ್ಭದಲ್ಲಿ ಆ್ಯಕ್ರಿಲಿಕ್ ಪೇಂಟಿಂಗ್ಸ್, ಕ್ಲಾಥ್ ಪೇಂಟಿಂಗ್ಸ್, ಆಯ್ಲ್ ಪೇಂಟಿಂಗ್ಸ್ ಅನ್ನು ಪ್ರಯತ್ನಿಸಿ ತನ್ನ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾಳೆ. ಕೆಲವು ಕಡೆ ಚಿತ್ರಕಲಾ ಪ್ರದರ್ಶನವನ್ನು ನೀಡಿ ಸನ್ಮಾನ ಪಡೆದಿದ್ದಾಳೆ. ‘ಸ್ವರ್ಣ ಕಲಾರತ್ನ’ ಹಾಗೂ ‘ ಕನ್ನಡ ಕುಲತಿಲಕ’ ವೆಂಬ ಬಿರುದನ್ನು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪಡೆದಿದ್ದಾಳೆ. ಚಿತ್ರಕಲೆಯಲ್ಲಿ ಸ್ಟೇಟ್ ಲೆವೆಲ್, ನ್ಯಾಷನಲ್ ಲೆವೆಲ್ ಲಿ ದ್ವಿತೀಯ, ಮಾತ್ರವಲ್ಲದೇ ಇಂಟರ್ ನ್ಯಾಷನಲ್ ಲೆವೆಲ್ ಲಿ ಭಾಗವಹಿಸಿ ಮೂರನೇ ಸ್ಥಾನವನ್ನ ಪಡೆದಿದ್ದಾಳೆ. ೨೦೨೨ನೇ ಸಾಲಿನ ಕನ್ನಡ ವಿಶ್ವದರ್ಶನ ದಿನಪತ್ರಿಕೆ ವತಿಯಿಂದ ‘ಚಿತ್ರಕಲಾ ವಿಶ್ವರತ್ನ’ ಎಂಬ ರಾಷ್ಟ್ರೀಯ ಮಟ್ಟದ ಅವಾರ್ಡ್ ನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಚಿಕ್ಕಂದಿನಿಂದಲೂ ಚಿತ್ರಕಲಾ ಸ್ಪರ್ಧೆ ಎಲ್ಲೇ ಇರಲಿ ಭಾಗವಹಿಸಿದರೆ ಇವಳಿಗೊಂದು ಸ್ಥಾನ ಕಟ್ಟಿಟ್ಟ ಬುತ್ತಿ. ಇಷ್ಟಲ್ಲದೇ ಕರಕುಶಲತೆಯಲ್ಲಿ ಪೇಪರ್ ಕ್ರ್ಯಾಪ್ಟಿಂಗ್, ಸ್ಟೋನ್ ಡಿಸೈನ್ಸ್ ಇತ್ಯಾದಿ ಚಟುವಟಿಕೆಗಳು, ಅಡುಗೆ ಮಾಡುವುದರಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದ

*******

ಚೈತನ್ಯಾ ಎನ್ ಭಟ್ ಅವರ ಕಲಾಕೃತಿಗಳು

One thought on “ಚೈತನ್ಯಾ ಎನ್ ಭಟ್-ಚಿತ್ರಕಲೆಯ ಯುವಪ್ರತಿಭೆ

Leave a Reply

Back To Top