ಇಮಾಮ್ ಮದ್ಗಾರ ಕವಿತೆ-ಮಂಕಾದ ಪ್ರೀತಿ

ಕಾವ್ಯ ಸಂಗಾತಿ

ಮಂಕಾದ ಪ್ರೀತಿ

ಇಮಾಮ್ ಮದ್ಗಾರ

ಮೃದುವಾದ ಮನಸು
ಒಲವ ಹಂದರಕೆ
ಹದವಾಗಿ ಹಬ್ಬಿಕೊಂಡಿತ್ತು.

ನೀನು ಒಲವ ಹೊಸ್ತಿಲು
ದಾಟುವ ತನಕ ಬದುಕು
ಬಲು ವೈನಾಗಿತ್ತು.

ಮನವ ಮುರಿದು
ಒಲವ ತೊರೆದು
ನೀನು ಒಲವ ಹೊಸ್ತಿಲು
ದಾ…ಟಿದೇಯಲ್ಲ..

ನೀನೇ ಹರಿದ ಗುಲಾಬಿಯ
ಎಸಳು ಗಳಂತೆ
ಇಂಚಿಂಚಾಗಿ ತುಂಡಾಗಿದೆ
ಹೃದಯ!!

ಮುಳ್ಳಿಗೆ ಸಿಕ್ಕ ಬಟ್ಟೆಯಂತೆ
ಬೆಂಕಿಗೆ ಸಿಕ್ಕ ಪತಂಗ
ದಂತಾಗಿದೆ ಮನಸು!!

ನನ್ನದೆಯ ಬಡಿತದಲಿ
ನಿನ್ನದೇ ಮಿಡಿತವಿದೆ
ನನ್ನ ಪ್ರೀತಿ ಮಾತ್ರ
ನಿನ್ನೆದೆಯ ಮಹಡಿಯಲಿ
ಮಂಕಾಗಿ ಮಸಣ
ಹುಡುಕುತಿದೆ!!!


Leave a Reply

Back To Top