ಅನುವಾದ ಸಂಗಾತಿ
ಶೇಕ್ಸಪಿಯರ್ ಸಾನೆಟ್-138
ಕನ್ನಡಕ್ಕೆ-ನಾಗರೇಖಾ ಗಾಂವಕರ
ಸತ್ಯದಿಂದಲೇ ಮಾಡಲ್ಪಟ್ಟಿದ್ದೆನೆ ತಾನೆಂದು ನನ್ನ ಪ್ರಿಯೆ ಪ್ರಮಾಣಮಾಡುವಾಗೆಲ್ಲ,
ನಾನವಳನ್ನು ನಂಬುತ್ತೇನೆ, ಅವಳು ಸುಳ್ಳಾಡುವುದು ತಿಳಿದೂ.
ಆಕೆ ಅಂದುಕೊಂಡಿದ್ದಿರಬಹುದು
ನಾನೊಬ್ಬ ಅಶಿಕ್ಷಿತ ಯುವಕನೆಂದೂ .
ಜಗದ ಕಪಟ ವಂಚನೆಯನ್ನರಿಯದವನೆಂದೂ.
ಹೀಗೆ ವ್ಯರ್ಥ ಯೋಚನೆಯಲ್ಲಿ ಆಕೆ ನನ್ನನ್ನು ಎಳಸು ಎಂದೂ ಭಾವಿಸುವಳು
ಗೊತ್ತಿದ್ದರೂ ಆಕೆಗೆ
ನನ್ನ ಹಳೆಯ ದಿನಗಳು ಎಷ್ಟು ಸಖತ್ತಾಗಿದ್ದವೆಂದು.
ನಾನೂ ಕೂಡ ಸುಳ್ಳಾಡುವ ಅವಳ ನಾಲಿಗೆಯನ್ನು ನಂಬುತ್ತೇನೆ.
ಹೀಗೆ ಎರಡೂ ಕಡೆಯಿಂದಲೂ ಸರಳ ಸತ್ಯವೂ ಮುಚ್ಚಲ್ಪಡುತ್ತದೆ.
ಆದರೆ ಯಾವ ಕಾರಣಕ್ಕಾಗಿ ಹೇಳುವುದಿಲ್ಲ ಆಕೆ ತಾನು ಅನ್ಯಾಯಿಯೆಂದು,
ಮತ್ತು ನಾನ್ಯಾವ ಕಾರಣಕ್ಕಾಗಿ ಹೇಳುವುದಿಲ್ಲ
ನನಗೆ ವಯಸ್ಸಾಗಿದೆಯೆಂದು
ಓಹ್! ತೋರಿಕೆಯ ನಂಬಿಕೆಯೇ ಪ್ರೀತಿಯಲ್ಲಿನ ಶ್ರೇಷ್ಠ ವ್ಯಸನ
ವಯಸ್ಸಾದಂತೆ ಪ್ರೀತಿಯಲಿ ಪ್ರಾಯವನ್ನು ಹೇಳಿಕೊಳ್ಳಲು ಬಯಸುವುದಿಲ್ಲ.
ಅದಕ್ಕಾಗಿ ನಾನು ಅವಳೊಂದಿಗೆ ಸುಳ್ಳಾಡುತ್ತೇನೆ.
ಮತ್ತವಳು ನನ್ನೊಡನೆ.
ಮತ್ತು ಸುಳ್ಳಾಡುವ ತಪ್ಪುಗಳಲ್ಲಿ ನಾವು ಮೆಚ್ಚಿಕೊಂಡಿದ್ದೆವೆ.
*********
ಕನ್ನಡಕ್ಕೆ -ನಾಗರೇಖಾ ಗಾಂವಕರ
ತೋರಿಕೆಯ ನಂಬಿಕೆಯೇ ಪ್ರೀತಿಯಲ್ಲಿನ ಶ್ರೇಷ್ಠ ವ್ಯಸನ…. ಎಷ್ಟು ಸತ್ಯವಾದ ಮಾತು… ಚೆಂದದ ಅನುವಾದ ನಾಗರೇಖ…..
ಧನ್ಯವಾದಗಳು ಮಮತಾ. ⚘️⚘️