ಅನುವಾದ ಸಂಗಾತಿ
ನನ್ನ ಪ್ರೀತಿಯ ಹುಡುಗಿಗೆ!?
ಮಲಯಾಳಂ ಮೂಲ: ಎ. ಅಯ್ಯಪ್ಪನ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.
ನಾನು ‘ ಮರೆತು’ ಬಿಟ್ಟೆ
ಎಂದು ನಿನ್ನ ‘ಮನಸ್ಸು’
ಹೇಳಲು ಪ್ರಾರಂಭಿಸಿದ್ದರೇ ಹುಡುಗಿ……,
ನೀನು ಸಂಕೋಚವ ಪಡದೇ
ನನ್ನ ಬಳಿಗೆ ಬಂದು ಬಿಡು….!
ನೀನು ಬರುವಾಗ
ನಾನು ಒಳ್ಳೆಯ
ಮಧುರವಾದ ‘ ನಿದ್ರೆ’ಯಲ್ಲಿ
ಇರುವೆ…..!
ನಷ್ಟಗಳನ್ನು ಮಾತ್ರ
‘ಹೃದಯ’ಕ್ಕೆ ಸೇರಿಸಿ ತಬ್ಬಿಕೊಂಡು
ನಿನ್ನನ್ನು ಕಾಯುತ್ತಾ ಮಲಗಿರುವೆ…!
ಕೊನೆದಾಗಿ ನೀನು
ನನ್ನನ್ನು ನಗು- ನಗುತ್ತಾ
‘ ಯಾತ್ರೆ’ ಕಳಿಸಬೇಕು…!
ನೀನು ಕಣ್ಣೀರು ಸುರಿಸಿದ್ದರೇ
ನನಗೆ ನಗುತ್ತಾ ಆನಂದದಿಂದ
ಯಾತ್ರೆ ಸಾಗಲು ಸಾಧ್ಯವಿಲ್ಲ..!
ಅಲ್ಲಿ ನನ್ನ ‘ಅಂತಿಮದರ್ಶನ’ಕ್ಕೆ
ಸೇರಿರುವ ನೂರಾರು ಮಂದಿ
ನೀನು ನನ್ನ ಪಾಲಿಗೆ
ಯಾರು ಎಂದು ಕೇಳಬಹುದು….!!?
ಆಗ ತುಸು ಸಂಕೋಚವ
ಪಡದೇ ಹೇಳಬೇಕು….!
ನೀನು ಮರೆತು ಬಿಟ್ಟರೂ
ನಿನ್ನನ್ನು ಮಾತ್ರ ಪ್ರೀತಿಸಿ
ಸೋತು ಹೋದ
ಒರ್ವ ಪಾಪದ ಮನುಷ್ಯ…!!!
ಬಿಡುವಿರದ ಬಾಳಲಿ ನನ್ನವಳನು ಓಲೈಸುತಿರುವೆ ಮುದ್ದಿಸಲು
ಚಿಂತೆಯ ಗೂಡಿನಲಿ ಸಮಯವ ಬಯಸುತಿರುವೆ ಮುದ್ದಿಸಲು
ಜೀವನವಿಡೀ ನಿನ್ನ ಕಾಲಿಗೆ ಗೆಜ್ಜೆಯಾಗಿರಲು ಪಣ ತೊಟ್ಟಿರುವೆ
ನನ್ನದಲ್ಲದ ವಿಧಿಯ ಕೃಪೆಗಾಗಿ ಹಂಬಲಿಸುತಿರುವೆ ಮುದ್ದಿಸಲು
ನಾಳೆಗಳ ಒತ್ತಡದಲಿ ಇಂದು ಉಸಿರಾಡುವುದೆ ಜೀವನವಾಗಿದೆ
ಏಕಾಂತದ ರಸಮಯ ತಾಣವನು ಅರಸುತಿರುವೆ ಮುದ್ದಿಸಲು
ಯುಗಯುಗಗಳಲೂ ಶೃಂಗಾರವೆ ಸಂಜೀವಿನಿ ರತಿ ಮನ್ಮಥರಿಗೆ
ಶಶಿಯು ನಾಚುವಂತೆ ಇರುಳನು ಸಿಂಗರಿಸುತಿರುವೆ ಮುದ್ದಿಸಲು
ಮಲ್ಲಿ ಹೃದಯ ನಿನ್ನ ಕನವರಿಕೆಯಲಿ ಪ್ರೇಮರಾಗ ಹಾಡುತಿದೆ
ಕಂಗೆಡಿಸುತಿರುವ ಆಭರಣಗಳನು ಜಾರಿಸುತಿರುವೆ ಮುದ್ದಿಸಲು