ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಸಂಜೀವಿನಿಯಂಥ ಭರವಸೆ ನಿನಗೆ.

ಕಲ್ಲಿರಲಿ ಮುಳ್ಳೇ ಇರಲಿ
ನಾನು ಮೊದಲು ಮುನ್ನಡೆವೆ
ನೀನಡಿಯ ಇಡುವೆಡೆಯಲ್ಲಿ
ಒಲವಿನ ಹೂ ಹಾಸುವೆ..

ಭರವಸೆ ಎಂಬುದು ಬದುಕನ್ನು ಅರಳಿಸುವ ಸಂಜೀವಿನಿ. ನಿನ್ನ ಭವಿಷ್ಯವನ್ನೆಲ್ಲ ನನಗಾಗಿ ಧಾರೆಯೆರೆಯಲು ಸಿದ್ಧಳಾಗಿರುವ ನಿನಗೆ ಆ ಭರವಸೆಯನ್ನು ಈಗಲೇ ಕೊಡುತ್ತಿರುವೆ ಓ ನನ್ನ ಸಂಗಾತಿಯೇ. ಕಷ್ಟಗಳೆಷ್ಟೇ ಬರಲಿ ಪ್ರೀತಿಗೇನೂ ಕೊರತೆಯಾಗದು. ಸುಖದ ಸುಪ್ಪತ್ತಿಗೆಯಿರದೆ ಹೋದರೂ ನಿನ್ನ ಪಾದಕ್ಕೆ ಮುಳ್ಳು ನಾಟದು!
ಇನ್ನಾದರೂ ನನ್ನ ನಂಬಿ
ನಗೆಯ ಚೆಲ್ಲು ಚೆಲುವೆ..

ಆ ಮುದ್ದು ಮಳೆಯಲ್ಲಿ ಮೃದು ಹೂವು ಅರಳುವುದು ಎಷ್ಟು ಸಹಜವೋ, ನಮ್ಮಿಬ್ಬರ ಹೃದಯಗಳು ಸೇರುವುದೂ ಅಷ್ಟೇ ಅನಿವಾರ್ಯವಿತ್ತು, ಜನ್ಮಾಂತರದ ಋಣವಲ್ಲವೇ, ನಮಗಾದರೂ ಬೇರೆ ದಾರಿ ಏನಿತ್ತು?
ಮೇರೆ ತೇರೆ ದಿಲ್ ಕಾ
ತೈರ್ ಥಾ ಎಕ್ ದಿನ್ ಮಿಲ್ನಾ
ಜೆಸೆ ಬಹಾರ್ ಆನೆಪರ್
ಥೆ ಹೆ ಫೂಲ್ ಕಾ ಖಿಲ್ನಾ…

ಆಕಾಶವೆ ಬೀಳಲಿ ಮೇಲೆ
ನಾನೆಂದು ನಿನ್ನವನು
ನೀನಿರುವುದೆ ನನಗಾಗಿ.
.
ಇಡೀ ಪ್ರಪಂಚವೇ ನಮ್ಮೆದುರಾಗಿ ನಿಂತರೂ, ಬೇರೆಯಾಗಲು ಸಾವಿರ ಕಾರಣಗಳೇ ಬಂದರೂ, ಜೊತೆಯಾಗಿರಲು ಪ್ರೀತಿಯಲ್ಲದೆ ಬೇರೆ ನೆಪವೇ ಇಲ್ಲದಿದ್ದರೂ, ನನ್ನ ಕೈಗೆ ಬೆಸೆದಿರುವ ನಿನ್ನ ಈ ಬೆಚ್ಚನೆ ಹಸ್ತ ಹೊಸೆದುಕೊಂಡೇ ಇರುವುದು ಇಂದು, ಇನ್ನೆಂದೂ..
ಲಾಖ್ ಮನಾಲೇ ದುನಿಯಾ
ಸಾಥ್ ನ ಯೆ ಛೂಟೇಗಾ
ಆಕೆ ಮೇರೆ ಹಾತೋಮೆ
ಹಾತ್ ನ ಯೆ ಛೂಟೇಗಾ..

ಮನಸುಗಳು ಸೇರಿದಾಗ ಅರಮನೆಯೂ, ಮೆರವಣಿಗೆಯೂ ಬೇಕಿಲ್ಲ. ಸಾವಿರ ಜನರ ಸಾಕ್ಷಿಯೂ ಮದುವೆಯ ಬಂಧಕ್ಕೆ ಅವಶ್ಯಕವಲ್ಲ. ಇಡೀ ಪ್ರಕೃತಿಯೇ ಮಧುರ ಮಿಲನಕ್ಕೆ ತಲೆಬಾಗುವುದಲ್ಲ!
ಹಸೆಮಣೆಯು ನಮಗೆ ಇಂದು
ನಾವು ನಿಂತ ತಾಣವು
ಹಕ್ಕಿಗಳ ಚಿಲಿಪಿಲಿ ಗಾನ
ಮಂಗಳಕರನಾದವು
ಸಪ್ತಪದಿ ಈ ನಡೆಯಾಯ್ತು
ಸಂಜೆ ರಂಗು ಆರತಿಯಾಯ್ತು..

ಗೆಳತಿ, ಇನ್ನು ನಿನ್ನೆಲ್ಲ ನೋವು ನನ್ನದು ಮತ್ತು ನನ್ನ ಸುಖವೆಲ್ಲ ನಿನಗೇ ಅರ್ಪಣೆ. ನಿನ್ನೆರಡು ಕಣ್ಣುಗಳೇ ನನ್ನ ಬಾಳಿನಾಗಸದ ಸೂರ್ಯಚಂದ್ರರು, ಈ ಮಾತು ನಿಜ ನಿನ್ನ ಮೇಲಾಣೆ. ನಂಬು ನನ್ನ ಓ ಜಾಣೆ..
ತೇರೆ ದುಖ್ ಅಬ್ ಮೇರೆ
ಮೇರೆ ಸುಖ್ ಅಬ್ ತೇರೆ
ತೇರೆ ಯೆ ದೋ ನೈನಾ
ಚಾಂದ್ ಔರ್‌ ಸೂರಜ್ ಮೇರೆ…
ಓ ಮೇರೆ ಜೀವನ್ ಸಾಥಿ..

ನಮ್ಮಿಬ್ಬರ ಕನಸುಗಳ ಬಣ್ಣ ಒಂದೇ, ನಮ್ಮ ಜೀವನದ ದಾರಿಯೂ ಒಂದೇ ಮತ್ತು ನಾವೆಂದೆಂದೂ ಒಂದೇ..
ತೇರೆ ಮೇರೆ ಸಪ್ನೆ ಅಬ್ ಏಕ್ ರಂಗ್ ಹೆ..


 ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top