ಹಾಯ್ಕುಗಳು ಭಾರತಿ ರವೀಂದ್ರ

ಕಾವ್ಯ ಸಂಂಗಾತಿ

ಭಾರತಿ ರವೀಂದ್ರ

ಹಾಯ್ಕುಗಳು

೧)
ಹೂವಿನ ಮನ:
ಹೆಣ್ಣಿನ ಮಾಧುರ್ಯವೆ
ಪ್ರಕೃತಿ ನೀತಿ.

೨)
ಹೂವು ಕಾದಿತ್ತು:
ಮುಂಜಾವಿನ ಮಂಜಿಗೆ
ದುಂಬಿ ನಕ್ಕಿತು.

೩)
ಸೋನೆಯು ಬಿಸಿ
ಅವಳ ನೆನಪಲ್ಲಿ,
ಹನಿ ಪ್ರೀತಿಯು.

೪)
ಸುರಿದ ಮಳೆ
ಮಣ್ಣಿನ ಸೊಗಡಿಗೆ,
ಅಮೃತ ಸ್ವಾದ.

೫)
ಬಾಳ ಹಾದಿಲಿ:
ಮುಳ್ಳು ಕೂಡ ಹೂವoತೆ,
ತೃಪ್ತಿ ಮನಕೆ .

೬)
ಮನ ನೆಮ್ಮದಿ:
ಆಸೆ ಕಮ್ಮಿ ಇರಲು,
ನೀರಾಳ ಬಾಳು.

೭)
ಜೀವನ ಪಾಠ:
ಅರಿತು ನಡೆದರೆ,
ಬಾಳು ಬಂಗಾರ.

೮)
ಸುಖ ಕನಸು:
ಕಂದಮ್ಮನ ಮೊಗದಿ,
ದೇವ ವಿಸ್ಮಿತ.

೯)
ಜಗ ಮರೆತ:
ಅವಳ ಒಲವಲಿ,
ಪ್ರೀತಿ ಪ್ರಣಯ.

೧0)
ಮಾಗಿದ ಮನ:
ಬಂಧ ಏಕೆ? ಪ್ರೀತಿಗೆ
ನಾ ನೀನು ಒಂದೇ.


Leave a Reply

Back To Top