ಅರ್ಚನಾ ಯಳಬೇರು-ತರಹಿ ಗಜಲ್

ಕಾವ್ಯ ಸಂಗಾತಿ

ತರಹಿ ಗಜಲ್

ನಯನ ಭಟ್ ಅವರ ಸಾನಿ ಮಿಸ್ರಾ

ವಿಹಗಗಳ ಸುಸ್ವರದ ಧ್ವನಿಯ ಆಸ್ವಾದಿಸುತ ಮುದದಿ ಸಾಕಲ್ಯವಾಗಿದೆ ಉದಯಾದ್ರಿ
ನಿರವಿಸುವ ನೀರವತೆಯಲಿ ಅನುರಣಿಸುವ ಹಸನು ಲಾಲಿತ್ಯವಾಗಿದೆ ಉದಯಾದ್ರಿ

ಮೆರುಗಾಗಿದೆ ಮುತ್ತಂತೆ ಪೊಣಿಸಿರುವ ತುಷಾರಗಳ ಗಡಣಕೆ ಉಷೆಯ ಕಿರಣಗಳು
ವಿಕ್ಷಿಪ್ತ ನಿಶೆಯನು ಹಳವಂಡಗೊಳಿಸುತಲಿ ಅಚಲಕೆ ಕೌಸ್ತುಭವಾಗಿದೆ ಉದಯಾದ್ರಿ

ವಹ್ನಿಯಂತಿರುವ ದಿಪಸ್ಪತಿಗೆ ಕಂದರ್ಪನ ದೌಲತ್ತು ನೀಡಿದೆ ಮೂಡಣದ ಅಂಬರ
ಶಾಡ್ವಲದ ಸಿರಿಯನ್ನು ಹುಲುಸುಗೊಳಿಸುವ ನಿತ್ಯ ಪಿಯೂಷವಾಗಿದೆ ಉದಯಾದ್ರಿ

ಕೌಮುದಿಯ ಸರಿಸಿ ಬಂದ ದಿನಪನ ಪ್ರದೀಪದಲಿ ಧರಣಿಯು ದೇದೀಪ್ಯಮಾನ
ಔಡಲಕೂ ಔರಸ ಒದಗಿಸಲು ಬಂದ ಅಂಶುವಿನಲಿ ಓಜಸ್ವಿಯಾಗಿದೆ ಉದಯಾದ್ರಿ

ದ್ಯುತಿಯ ಹಿತ ಸ್ಪರ್ಶದಲಿ ಅರಳುವ ತೋಯಜವು ನಿಷ್ಕಳಂಕ ನಿಷ್ಕಲ್ಮಶ ಅರ್ಚನಾ
ಸಮ್ಮೋದದಲಿ ಸರಸಗೈವ ಸಪ್ತಾಶ್ವನ ಶೃಂಗಾರದಲಿ ಮುಕುರವಾಗಿದೆ ಉದಯಾದ್ರಿ


4 thoughts on “ಅರ್ಚನಾ ಯಳಬೇರು-ತರಹಿ ಗಜಲ್

  1. ಉದಯಾದ್ರಿಯಲಿ ಮಿನುಗುತ ಉದಯಿಸಿದ ಮಯೂಖನಿಂದ ನಿರ್ಮಿತವಾದ ಸೊಬಗಿನ ವರ್ಣನೆ ಸೊಗಸಾಗಿದೆ ಡಿಯರ್

    1. ತುಂಬು ಹೃದಯದ ಧನ್ಯವಾದಗಳು ಡಿಯರ್ ❣️❣️

    1. ಧನ್ಯವಾದಗಳು ಮೇಡಂ ಮುಂದಿನ ಬರಹದಲ್ಲಿ ಖಂಡಿತಾ ಪಾಲಿಸುವ ಪ್ರಯತ್ನ ಮಾಡ್ತೀನಿ

Leave a Reply

Back To Top