ಕಾವ್ಯ ಸಂಗಾತಿ
ನಾ…ನೀ
ವಿಶಾಲಾ ಆರಾಧ್ಯ
ಬಾ ಒಮ್ಮೆ ಈ ಹೊಂಗೆ ನೆರಳಿಗೆ
ಎರಡು ಘಳಿಗೆ ಕುಳಿತು
ಮುಖಾಮುಖಿಯಾಗೋಣ
ಪ್ರೇಮದ ದೀಪ ಹಚ್ಚಿಟ್ಟು
ನನ್ನ ಮುಖ ನೀ ನಿನ್ನ ಮುಖ ನಾ
ನೋಡಿ ಮನವ ತಣಿಸೋಣ
ಜೋಡಿ ಕಂಗಳ ನೋಟದಲಿ
ಪ್ರತಿ ಅಕ್ಕರವ ಒಮ್ಮೆ ಓದೋಣ
ಅಲ್ಲೇ ಒಂದು ಕಾವ್ಯ ಬರೆಯೋಣ
ಕಂಗಳ ಬೆಸುಗೆಯಲಿ ಕೂತು
ಬರೆದ ಕಾವ್ಯಕ್ಕೊಂದು
ಸುಂದರ ರಾಗವ ರಚಿಸೋಣ
ಆಲಾಪದೊಡನೆ ಪಲ್ಲವಿಗೆ
ಚರಣವ ಬೆರೆಸುತ
ಮೋಹನ ರಾಗವೇ ಹಾಡೋಣ
–[——————————-
ಭಾವಪೂರಿತ ಕವಿತೆ
ಧನ
ಧನ್ಯವಾದಗಳು ಮೆಚ್ಚುಗೆಗೆ
ಧನ್ಯವಾದಗಳು ಮೆಚ್ಚುಗೆ ಗೆ
ಚೆಂದದ ಕವನ
Very nice
Wow super , so nice lines
☺ ಧನ್ಯವಾದಗಳು