ದೇವರಾಜ್ ಹುಣಸಿಕಟ್ಟಿ.

ವ್ಯಾಲಂಟೈನ್ ವಿಶೇಷ

ದೇವರಾಜ್ ಹುಣಸಿಕಟ್ಟಿ.

ಗಜಲ್

ಅವನ ಕಣ್ಣೀರ ಕಣ್ಣ್ ಕನ್ನಡಿಯಲ್ಲಿ ಹಿಡಿದಿಟ್ಟಿದ್ದ ಬಿಂಬ ಅಮರವಾಯ್ತು ಸಖಿ
ಪ್ರೀತಿ ಸುಳ್ಳೆಂದವರ ಎದೆಗೂಡಿಗೆ ಗುಂಡಿಕ್ಕಿ ಕೊಂದಂಗಾಯ್ತು ಸಖಿ

ಹೃದಯದಿ ಅವಿತ ಕನಸುಗಳಿಗೆ ರೆಕ್ಕೆ ಮೂಡಿ ಆಗಸ ಚುಂಬಿಸಿದ್ದು ಸುಳ್ಳಲ್ಲ
ಸುಡುಗಾಡು ಲೋಕದ ಹಂಗ ತೊರೆದು ಹೃದಯ ತೆರೆದಾಯ್ತು ಸಖಿ

ಬರಡು ಎಂದ ಎದೆಯ ಭುವಿಯಲ್ಲಿ ಪ್ರೀತಿ ಮೊಳೆಯಿತು
ಚಂದ್ರಚುಂಬನ ತುಟಿಯ ಕಂಪನ ಷರಾ ಬರೆದಾಯ್ತು ಸಖಿ

ಕಣ್ಣ್ ನೆಟ್ಟ ಕಡೆಯಲ್ಲಿ ಅವನೇ ಅವನು ಹೃದಯ ಬಿಕರಿಯಾಗಿದ್ದು ದಿಟವಲ್ಲವೇ?
ಉರುಳಿದ ರಾತ್ರಿ ಹಗಲುಗಳು ಪ್ರೀತಿಯ ಅಮೃತ ಅಭಿಷೇಕದಲಿ ಮಿಂದಿಸಿದ್ದಾಯ್ತು ಸಖಿ

ವಿಧಿಯ ಬರಹಕ್ಕೂ ಈಗೀಗ ತಾನೇ ಸೋಲುವ ಭಯವಾಗಿದೆ
ಪ್ರೀತಿ ಅಮರ ಎಂದವರ ಆತ್ಮ ಚಿರಕಾಲ ಶಾಶ್ವತವಾಯ್ತು ಸಖಿ

ಪಾಪ ಬಡಪಾಯಿ ಹಿಡಿಯಷ್ಟು ಹೃದಯ ನಮ್ಮ ಕೈಯಲ್ಲಿ ನರಳಿದ್ದು ಸ್ಪುಟವಲ್ಲವೇ?
ಜಗದ ಒಲವ ಇಂಚಿಂಚು ಮೊಗೆದು ಕುಡಿಸಿದ್ದು ಅಚ್ಚಳಿಯದಾಯ್ತು ಸಖಿ

ಪ್ರೀತಿ ಉರುಳು ಎಂದವರ ಬಾಯಿಗೆ ಬೀಗ ಜಡಿದದ್ದು ಖಾತರಿ
ಈ ದೇವನರಮನಯ ಅಮರಪ್ರೀತಿ ನೋಡುವ ಬಯಕೆ ಅಲ್ಲಿ ಮೂಡಿಯಾಯ್ತು ಸಖಿ


Leave a Reply

Back To Top