ವ್ಯಾಲಂಟೈನ್ ವಿಶೇಷ
ನಿಶೆ
ಅರೆ ತೆರೆದ ಕದ
ಚಂದಾದ ಹೂಬಿಟ್ಟವಳ ಅಂಗಳ ಆ
ಸ್ವಾದಿಸುತಲಿ ಇಟ್ಟವನ ಮುಂದಡಿ
ಗೆ ತಾಗಿತು ಹಳೆಯ ನೆನಪು ಅವಳದೆ
ಹಳೆಯದಾದರೇನು ಪ್ರೀತಿ ಬೆರೆತ
ಬಂಧನದ ಚಂದವನರಿತು ಬಂದವನ
ಸ್ವಾಗತಿಸಿತು ಅದೇನೊ ಕಣ್ಣೊಳವಿತಿರಿಸಿದ
ಅದೆ ಪ್ರೀತಿ ತುಳುಕುವ ಮೊಗದ ನಗು
ಬಾ ಕುಳಿತುಕೊ, ನೀರು ಕುಡಿ,ಹೇಗಿರುವೆ
ಸೊರಗಿರುವೆಯಲ್ಲ?ಎಲ್ಲರೂ ಆರಾಮವೆ
ಎಂದವಳ ಮಾತುಗಳು ಕಿವಿಗೆ ಬೀಳುವ
ಮೊದಲೇ ಸುತ್ತ ಪರಕಿಸಿದನವನು
ಎಂಥ ಚಂದವೀ ಕೂಡ್ರುವ ಕೋಣೆ
ಸುತ್ತಲಂದದ ಬಣ್ಣ ಹೊದೆಸಿದ ಗೋಡೆ
ಎದುರುಬದಿರಾಗಿರಿಸಿದ ಕಟ್ಟಿಗೆಯ ಕುರ್ಚಿ
ಹೂಗುಚ್ಛ ಹಿಡಿದಂತೆ ಗಾಜಿನ ಟಿಪಾಯಿ
ಆದರೂ ಕಾಡುತಿದೆ ಎದುರಿನ ಕದವು
ಕೇಳುವಂತಿವೆ ಪ್ರಶ್ನೆ ನೋಡುವ ಕಣ್ಣು
ಅವಳ ಮಾತುಗಳಲೇನೊ ಮುಚ್ಚಿಡುವ ಭಾವ
ನನ್ನ ಮುಖದೊಳಗೇನೊ ಆತಂಕದ ತಾವ
ತಿರು ತಿರುಗಿ ಹೇಳುತಲವಳು ಏನನೋ
ಕದದ ನೋಟವನು ಕದಲಿಸುವ ಹವಣಿಕೆ
ಅಷ್ಟೇ ಕಾತುರವು ಹೆಚ್ಚುತಲಿ ನನ್ನೊಳಗೆ
ಕದದ ಹಿಂದೇನಿದೆ ಎಂದು ಕೇಳಿಯೇ ಬಿಟ್ಟೆನು
ತೆರೆದು ಕದವನು ಸಾವಕಾಶದಿ ಬದಿ ಸರಿದಳು
ಪೋಣಿಸಿಟ್ಟ ಹೂಹಾರದ ನಡುವಲಿ ಚಿತ್ರಪಟ
ನೋಡ ನೋಡುತಲೇ ಕಣ್ಣು ಕತ್ತಲಾವರಿಸಿ
ನಿಂತೆ ಬೀಳುವುದನು ತಡೆದು ಸಾವರಿಸಿ
ಪ್ರೀತಿಯಂತೆ ಒಲುಮೆಯಂತೆ ಮುಂದುವರೆದು
ಜೀವದಂತೆ ಕಾಯ್ವದಂತೆ ಎಂದೂ ಬಿಡದಂತೆ
ಜಗದ್ಯಾವ ಉಸಿರು ನೆರಳು ಸೋಕದಂತೆ
ದೇವನೆಂದೆನ್ನ ಪಟವನು ಪೂಜಿಸಿಹಳು
ನೋಡಿ ನನ್ನನು ನಾ ನಾಚಿ ನಿಂತೆನು
ಪ್ರೀತಿಯ ನಿಜದರ್ಥ ನಿಜದಲಿ ತಿಳಿದೆನು
ಜಗದೆದುರು ಸಾರುವೆವು ಕೇವಲ ನಾವೆಲ್ಲ
ಒಳಗೆ ಕಾಪಿಟ್ಟವಳು ಯಾವತ್ತಿಗೂ ಶ್ರೇಷ್ಠ
ಅಂಥವರು ಮಾತ್ರ ಪ್ರೀತಿಯ ಬಲ್ಲಿದರು
ನಿಶೆ ಮೇಡಂ ತಮ್ಮ ಕವಿತೆ ಓದುಗನಲ್ಲಿ ನಶೆ ತರಿಸುತ್ತಿದೆ
ಹೂ ಮನಸು, ಎದೆಯೊಳಗೆ ಇಳಿದ ಬತ್ತದ ಒಲುಮೆ ಭಾವದ ತುಡಿತ ಸುಂದರವಾಗಿ ಚಿತ್ರಿಸುವ ರೀತಿ ಮನಮುಟ್ಟಿ ಭಾವತರಂಗಗಳನ್ನು ಹುಟ್ಟಿಸುತ್ತದೆ.
ಧನ್ಯವಾದಗಳು ಸರ್
ನಶೆ ಇರಬೇಕು ಬದುಕಿಗೆ,A S.
Manadaalada Maatu nija NiShe ji
Thanku
ಹೃದ್ಯ ಕವಿತೆ
ಧನ್ಯ ಸುನಿತೆ
cholo varediri…
Thanku
cholo barediri…
ಸೊಗಸಾದ ಕವಿತೆ
ಧನ್ಯವಾದಗಳು ಸರ್
Supermadam
ಪದಗಳ ಪೋಣಿಸಿ ಸಾಹಿತ್ಯದ ಮಾಲೆಗಳಿಗೆ ಶರಣು.
Dhanyavaadagalu
ವ್ಯಾಲೆಂಟೈನ್ ಎಂಬ ಋಷಿ ಸಂತ ಪ್ರೇಮಿಗಳನ್ನು ಒಂದಾಗಿಸಿದ ದಿನ.ವಿದೇಶ ದಲ್ಲಿ ನಡೆಯುತ್ತೆ ಆದ್ರೆ ನಮ್ಮದೇಶ ದಲ್ಲಿಯೂ ಹೆಜ್ಜೆ ಇಟ್ಟಿದೆ.ಆಚರಣೆ ಅವರವರಿಗೆ ಬಿಟ್ಟಿದ್ದು.
ಒಂದೊಳ್ಳೆಯ ಕವಿತೆ ಸಿಸ್.. ಹೃದ್ಯ ❤