ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ-
ಗಝಲ್
ಅಹಂಕೃತಿಗೆ ಮನ್ನಣೆ ಕೊಟ್ಟು ಬಾಳಿದವರ ಕಂಡಿದ್ದೇನೆ
ಮೋಹದಲಿ ಮುಳುಗಿ ಜಗವನು ಆಳಿದವರ ಕಂಡಿದ್ದೇನೆ
ಕುತಂತ್ರಿಗಳಾಗಿ ಜೀವನ ಚಕ್ಕಡಿಯ ಎಳೆದು ನಿಂತಿಹರೇಕೆ
ಕುತರ್ಕವಾದ ಮಾಡುತ ಅಸತ್ಯ ಹೇಳಿದವರ ಕಂಡಿದ್ದೇನೆ
ಪರರ ಮಾತಿಗೆ ಅಗೌರವವನ್ನುತೋರುವುದನು ಬಿಟ್ಟುಬಿಡಿ
ಮರಣ ಬಂದರೂ ಚಿರಾಯುವಾಗಿ ಉಳಿದವರ ಕಂಡಿದ್ದೇನೆ
ಇಹಲೋಕದಿ ಬೀಳುವ ಉಲ್ಕೆಗಳಾಗಿಹೋಗುವಿರಿ ಒಮ್ಮೆ
ಸಹನಶೀಲರಾಗಿ ಕೊನೆಗೆ ಕಾಲಿಗೆ ಬೀಳದವರ ಕಂಡಿದ್ದೇನೆ
ಕಾಲವೆ ತಕ್ಕ ಪಾಠವ ಕಲಿಸುತ್ತದೆಎನ್ನುತಿಹನು ಅಭಿನವ
ಶೂಲದ ಕೆಳಗೆ ನಾಮಾವಶೇಷವಾಗಿಅಳಿದವರ ಕಂಡಿದ್ದೇನೆ