ಕಗ್ಗತ್ತಲೆಯ ಖಂಡದಲ್ಲಿ-ಲೋಕಾರ್ಪಣೆ

ಪುಸ್ತಕ ಸಂಗಾತಿ

ಡಾ. ಅರಕಲಗೂಡು ನೀಲಕಂಠಮೂರ್ತಿ ವಿರಚಿತ ಪ್ರವಾಸಕಥನ

ಕಗ್ಗತ್ತಲೆಯ ಖಂಡದಲ್ಲಿ-ಲೋಕಾರ್ಪಣೆ

“ಸಾಮಾನ್ಯವಾಗಿ ಪ್ರವಾಸ ಕಥನಗಳಲ್ಲಿ ಲೇಖಕರು ಆಯಾ ದೇಶದ ಸಂಸ್ಕೃತಿ ಪರಂಪರೆಯನ್ನು ವೈಭವೀಕರಿಸುವುದೇ ಹೆಚ್ಚು, ಆದರೆ ಡಾ. ಅರಕಲಗೂಡಿನ ನೀಲಕಂಠಮೂರ್ತಿಯವರು ಆಫ್ರಿಕಾ ಖಂಡದಲ್ಲಿ ತಮ್ಮ ವೈದ್ಯ ವೃತ್ತಿಯನ್ನು ಹದಿಮೂರು ವರ್ಷಗಳ ದೀರ್ಘಾವಧಿಯ ತಮ್ಮ ಅನುಭವದಲ್ಲಿ ಆ ದೇಶಗಳಲ್ಲಿನ ಮಹಿಳೆಯರ ಮೇಲೆ ನೆಡೆಸುತ್ತಿದ್ದ ಸುನ್ನತಿಯಂತಹ ಅವೈಜ್ಞಾನಿಕ ಪದ್ಧತಿಯನ್ನು, ಅಲ್ಲದೆ ಸೋಮಾಲಿಯಾ ದೇಶದ ಐತಿಹಾಸಿಕ, ಭೌಗೋಳಿಕ, ರಾಜಕೀಯ ಹಾಗು ಯುದ್ಧದ ಪೂರ್ವಸಿದ್ಧತೆ ನೆಡದ ಆತಂಕಕಾರಿ ಸಂಗತಿಗಳನ್ನು ಬಹಳ ವಿಶಿಷ್ಟವಾಗಿ “ಕಗ್ಗತ್ತಲೆಯ ಖಂಡದಲ್ಲಿ” ದಾಖಲಿಸಿದ್ದಾರೆ. ಆ ನಿಟ್ಟಿನಿಂದ ಈ ಪ್ರವಾಸ ಕಥನ ವಿಶಿಷ್ಟತೆಯಿಂದ ಕೂಡಿದೆ” ಎಂದು ಖ್ಯಾತ ವಿಜ್ಞಾನ ಲೇಖಕರಾದ ಶ್ರೀಯುತ ಕೊಳ್ಳೇಗಾಲ ಶರ್ಮ ರವರು “ಕಗ್ಗತ್ತಲೆಯ ಖಂಡದಲ್ಲಿ” ಕೃತಿಯ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಹೇಳಿದ ಮಾತಿದು.

“ವೈದ್ಯವೃತ್ತಿಯಲ್ಲಿ ಇದ್ದುಕೊಂಡು ಕವಿತೆ – ಕವನ, ಕಥೆಗಳನ್ನು ಬರೆಯುತ್ತ ಸಾಹಿತ್ಯಲೋಕದಲ್ಲಿ ಸದಾ ಸಕ್ರಿಯರಾಗಿರುವ “ಡಾ. ಅರಕಲಗೂಡು ನೀಲಕಂಠಮೂರ್ತಿ” ಯವರು ಅಪರೂಪದಲ್ಲಿ ಒಬ್ಬರು. ಇವರ ಈ ಸಾಹಿತ್ಯಾಸಕ್ತಿ, ಬರವಣಿಗೆ ವೈದ್ಯಲೋಕದಲ್ಲಿ ಒಂದು ಹೆಮ್ಮೆಯ ವಿಷಯ” ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕರಾದ ಶ್ರೀಯುತ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಯವರು ಕೃತಿಯ ಲೋಕಾರ್ಪಣೆಯನ್ನು ಮಾಡುತ್ತಾ ನುಡಿದರು.

ಫೆಬ್ರವರಿ 5 ನೇ ತಾರೀಕು ಭಾನುವಾರ ಮೈಸೂರಿನ “ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್” ಸಭಾಂಗಣದಲ್ಲಿ ಕೃತಿ ಲೋಕಾರ್ಪಣೆಯ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಶ್ರೀಯುತ ಡಾ.ಕೆ ಎಸ್. ರಂಗಪ್ಪ ನವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಚುಟುಕು ಯುಗಾಚಾರ್ಯರೆಂದೇ ಪ್ರಸಿದ್ಧರಾಗಿರುವ ಡಾ. ಎಂ ಜಿ ಆರ್ ಅರಸ್ (ವೈದ್ಯವಾರ್ತ ಪ್ರಕಾಶನ”) ಹಾಗು ಶ್ರೀಮತಿ ದೇವಕಿ ಲಕ್ಷ್ಮಿ ಅಚ್ಚುಕಟ್ಟಾಗಿ ನೆಡೆಸಿಕೊಟ್ಟರು.

ವೃತ್ತಿಯಲ್ಲಿ ವೈದ್ಯರು ಹಾಗು “ಕಗ್ಗತ್ತಲೆಯ ಖಂಡದಲ್ಲಿ” ಕೃತಿಯ ಲೇಖಕರಾದ ಡಾ. ಅರಕಲಗೂಡು ನೀಲಕಂಠಮೂರ್ತಿ ಮಾತನಾಡುತ್ತ ಆಫ್ರಿಕಾ ಖಂಡದಲ್ಲಿನ ತಮ್ಮ ಅನುಭವಗಳು ಹೇಗೆ ಕೃತಿಯಾಗಿ ಮೂಡಿಬಂದಿದೆ ಎಂದು ವಿವರಿಸುತ್ತಾ ಕೃತಿ ಹೊರಬರಲು ಕಾರಣರಾದ ಎಲ್ಲರನ್ನು ಮನಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಿದರು.

ಕಿಕ್ಕಿರಿದು ತುಂಬಿದ ಸಮಾರಂಭದಲ್ಲಿ, ಶ್ರೀಯುತ ಅಮರ್ನಾಥ್ ರಾಜೇ ಅರಸ್, ಶ್ರೀ ಇಲಯ ಆಳ್ವರ್ ಸ್ವಾಮೀಜಿ, ಶ್ರೀ ಲಿಂಗರಾಜೇ ಅರಸ್, ನೀಲಕಂಠ ಮೂರ್ತಿಯವರ ಧರ್ಮಪತ್ನಿ ಉಪಸ್ಥಿತರಿದ್ದರು.
———————————————

ಕು ಶಿ ಚಂದ್ರಶೇಖರ್

One thought on “ಕಗ್ಗತ್ತಲೆಯ ಖಂಡದಲ್ಲಿ-ಲೋಕಾರ್ಪಣೆ

  1. Hi Sir, I’m also one of the fan of your Kaggathala Khandadalli experience story, it was excellent!!!… i was read it through posted by Chandra shekar Kulagana. shortly I will buy this book and read it again.

Leave a Reply

Back To Top