ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್

ಕಾವ್ಯ ಸಂಗಾತಿ

ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್

ಪ್ರಾಸದಲಿ ಬರೆಯಬೇಕೆಂಬ ಹಟಕೆ ಕಾವ್ಯ ಹುಟ್ಟಿತೇ ಗೆಳತಿ
ತ್ರಾಸದಲಿ ಗೀಚಿದ ಸಾಲುಗಳು ಪುಟಕೆ ಭಾವ ತಟ್ಟಿತೇ ಗೆಳತಿ

ಹೇಳುವದು ನಿಖರವಾಗದಿರೆ ಮಾತಿಗೆದ್ವಂದ ಅರ್ಥ ಕೊಡುವದಿಲ್ಲವೇ
ಕೇಳುವದು ನಿಚ್ಚಳವಾಗಿರದಿರೆ ಎದೆಗೆ ಸಾಲು ಮುಟ್ಟೀತೆ ಗೆಳತಿ

ಹಲವು ಸಾಹಿತ್ಯ ದಾಖಲೆ ಬಲು ಎತ್ತರಕ್ಕೆ ಏರುವಾಸೆ ಅವಸರದಿ
ಕೆಲವು ಪದಗಳ ರಚಿಸಿ ಮನದ ಹತ್ತಿರಕ್ಕೆ ನೆನಪು ಒಟ್ಟೀತೆ ಗೆಳತಿ

ಹಳೆಯ ಹಾಡಿನಲಿ ಹೊಸನುಡಿ ಸೇರಿಸಿಕದಿಯುವ ಹುನ್ನಾರ
ಕಳೆಯ ಕೀಳದೆ ಬಿತ್ತುವ ಅಜ್ಞಾನದ ಸಸಿಹೂ ಬಿಟ್ಟೀತೆ ಗೆಳತಿ.

ಅಂಕೆಯಲ್ಲಿ ಏರುವ ಕವಿತೆ ಮೆಚ್ಚಳು ಸಾಕಿಸಂಭ್ರಮಿಸದಿರು ತೂಕವಿಲ್ಲ
ಶಂಕೆಯಲ್ಲಿ ಸುರಿದು ಒಡಲಕಿಚ್ಚು ನೂಕಿಆತ್ಮ ಸುಟ್ಟೀತೆ ಗೆಳತಿ


Leave a Reply

Back To Top