ಮಹಾದೇವ ಹಳ್ಳಿ ಚಿಕ್ಕಸೂಗೂರು-ಪ್ರೀತಿಯ ಹುಚ್ಚು

ಕಾವ್ಯ ಸಂಗಾತಿ

ಮಹಾದೇವ ಹಳ್ಳಿ ಚಿಕ್ಕಸೂಗೂರು

ಪ್ರೀತಿಯ ಹುಚ್ಚು

ಹಿಂಬಾಲಿಸಿ ಹಿಡಿಸಿದೆ ನೀ
ಎನಗೆ ಪ್ರೀತಿಯ ಹುಚ್ಚು
ಹುಡುಗಾಟದ ಹುಡುಗಿ ನೀ
ನನ್ನೆದೆಯಲ್ಲಿ ನಿನ್ನದೇ ಅಚ್ಚು
ಅದೆಂಥ ಮಾಟಗಾರ್ತಿ ನೀನು
ನಿನ್ನಲ್ಲೇ ಸೆರೆಯಾಗಿಸಿದೆ ನನ್ನನು ||ಪಲ್ಲವಿ||

ತಿರು ತಿರುಗಿ ಸನ್ನೆ ಮಾಡಿ
ನೋಡೋ ಹಾಗೆ ಮಾಡೋ
ಆಕರ್ಷಣೆಯ ಆಮದುಗಾರ್ತೀ….
ಏ ಹುಡುಗಿ ನಾ ನಿನಗಾಗಿ
ಕನವರಿಸೋ ಹಾಗೆ ಮಾಡೋ
ನೀ ಪ್ರೀತಿಯ ಜಾದೂಗಾರ್ತಿ….
ನಡೆದಿದೆ ನಡು ಹಾದಿಯಲ್ಲಿ
ಪ್ರೀತಿಯ ಮೆರವಣಿಗೆ
ಸಡಗರ ಬಲು ಜೋರಾಗಿ
ಸಾಗಿದೆ ಅರಮನೆಗೆ……!

ದಿನ ದಿನವೂ ಸೋಲುತಿಹೆನು
ನನಗೇ ತಿಳಿಯದ ಹಾಗೆಯೇ
ಕಾದಿದೆ ಏನೋ ಗ್ರಹಚಾರ…
ತರಾತುರಿ ಓಡಿ ಬಂದೆನು ನಾ
ಅದೇನೋ ತಿಳಿಯದೆ ಈಗೀಗ
ಶುರುವಾಗಿದೆ ಸಂಶಯ ಒಂತರಾ….
ನಿನ್ನಿಂದಲೇ ಆರಂಭವು
ಈ ಪ್ರೀತಿಯ ಅನ್ವೇಷಣೆ
ನಿನಗಾಗಿಯೇ ಈ ಶ್ವಾಸವು
ನಿಜವಿದು ನಂಬು ನನ್ನಾಣೆ….!


Leave a Reply

Back To Top