ಕಾವ್ಯಸಂಗಾತಿ
ಗಜಲ್
ಸ್ಮಿತಾರಾಘವೇಂದ್ರ
ಬಲಿತ ರೆಕ್ಕೆಗಳು ಬಸವಳಿಯುವವರೆಗೆ ಕಾಯಬೇಕು
ಬಿಡದ ಮಾಯೆಗಳು ಮರೆಯಾಗುವವರೆಗೆ ಕಾಯಬೇಕು
ಹೂವುಗಳೆಲ್ಲ ಕಾಯಿಕಚ್ಚಿಯೇ ಉದುರುತ್ತವೆಯೇನು ಹೇಳು
ಒಣಬಯಲು ರೂಡಿಯಾಗುವವರೆಗೆ ಕಾಯಬೇಕು
ತಂತುಗಳ ಉಳಿಸಿಕೊಳ್ಳುವುದು ಬಂಧನವೆನ್ನುತ್ತಾನೆ ಅವನು
ಭಾವಗಳು ತಾನಾಗಿಯೇ ಕಳಚಿಕೊಳ್ಳುವವರೆಗೆ ಕಾಯಬೇಕು.
ಹಕ್ಕಿಗಳು ಹಸಿರನರಸಿಯೇ ವಲಸೆ ಬಂದರೂ ನಲಿವೇ ನಿಜ
ಹೊರಡುವುದೇ ದಿಟವಾದಮೇಲೆ ಮತ್ತೆ ಬರುವವರೆಗೆ ಕಾಯಬೇಕು
ಕಡಿಲಿಗಿಳಿದು ಬಲೆಯ ಬೀಸುವ ಬದುಕು ಅಲೆಗಳ ಎದುರಿಸದಿದ್ದರೆ ಹೇಗೆ
ಏರಿಳಿತದ ನಡೆಯಲ್ಲಿ ಸಂಯಮ ಸಾಧಿಸುವವರೆಗೆ ಕಾಯಬೇಕು
ಸಾಕೆಂದು ತೊರೆದ ಭಾವಗಳೆಲ್ಲ ಗೂಡಿನ ದಾರಿ ಕೇಳುತ್ತಿವೆ “ಮಾಧವ”
ಕತ್ತಲಮೂಲೆಗೆ ಬಿಸಿಲ ಕೋಲು ಬೀಳುವವರೆಗೆ ಕಾಯಬೇಕು
ಚಂದ ಭಾವ ಬದುಕಿಗೆ ದಾರಿ ತೋರುವ ಗಜಲ್
Thanku so much