ಕಾವ್ಯ ಸಂಗಾತಿ
ಅವಳು
ಸಾಕ್ಷಿ ಶ್ರೀಕಾಂತ ತಿಕೋಟಿಕರ
ಕರೆದರೂ ಕೇಳಿಸದಂತ ಮೌನ
ಮನದತುಂಬ ಅವಳದೇ ಧ್ಯಾನ
ಮುಖ ಕಾಣಲು ತವಕಿಸುವ ಮನ
ಹಗೆ ಸಾಧಿಸುವ ದುರಾಭಿಮಾನ
ಪ್ರತಿಗಳಿಗೆ ಉಲಿಯುವೆ ಹೆಸರು
ಉತ್ತರಿಸಳು ನನ್ನದು ನಿಟ್ಟುಸಿರು
ಮಳೆಬಂದು ಸುತ್ತಲ ಹಚ್ಚ ಹಸಿರು
ಮನದ ತುಂಬ ನೆನಪಿನ ಕೆಸರು
ಪಟ ಪಟನೆ ಬೀಳುವ ಮಳೆಗೆ
ಹನಿಹನಿ ಸೋರುವ ಮಾಳಿಗೆ
ಪ್ರೇಮಪಾತ್ರೆ ಹಿಡಿಯುವೆ ಬಾಳಿಗೆ
ಹಟವಾದಿ ಬರುವದಿಲ್ಲ ಬಳಿಗೆ
ತಂದ ಮಲ್ಲಿಗೆಯೂ ಮುಡಿಯಳು
ಬಾಡಿದೆ ಮನ ಏಕೆ ಮಿಡಿಯಳು
ಒಂಟಿಬಾಳಿನಂಟಿಗೆ ತೊಡಿಯಳು
ಹಟವಾದಿ ಚಿತ್ತವನು ಕಡಿಯಳು
ಹರಾಜಿಗೆ ಬಿದ್ದ ಭಾವನೆಗಳು ಬೆತ್ತಲು
ಗಳಿಗೆ ಕಳಿಯಲು ನೆನಪು ಮುತ್ತಲು
ನಗುವಳು ಬಾಳಿನಲಿ ಹಬ್ಬಿಸಿ ಕತ್ತಲು
ನಾನೆ ಹಾಕಿದ ಮಲ್ಲಿಗೆ ಪಟದ ಸುತ್ತಲೂ. .