ಡಾ ಶಶಿಕಾಂತ ಪಟ್ಟಣ ಕವಿತೆ ನನ್ನವಳು

ಕಾವ್ಯ ಸಂಗಾತಿ

ನನ್ನವಳು

ಡಾ ಶಶಿಕಾಂತ ಪಟ್ಟಣ

ನನ್ನವಳು ನನ್ನವಳು
ನನ್ನೆದೆಯ ಗೂಡಿನಲಿ
ಬೆಚ್ಚಗೆ ಇರುವವಳು
ಮುಂಗಾರು ಮಳೆಯಲ್ಲಿ
ಮಿಂದು ಹಸಿರಾಗುವಳು
ಕನಸುಗಳ ಬಿತ್ತಿ
ಕವನಗಳ ಹೊಸೆಯುವಳು
ಮನದ ಅಂಗಳ ಮುಂದೆ
ರಂಗವಲಿ ಹೊಯ್ಯುವಳು
ಮನದ ತೊಲ ಬಾಗಿಲಿಗೆ
ತೋರಣವ ಕಟ್ಟುವಳು
ತರು ಗುಲ್ಮಲತೆ ತಂದು
ಕಂಕಣವ ಕಟ್ಟುವಳು
ಜರತಾರಿ ರೇಶಿಮೆ ಬಣ್ಣದ ಅಂಗಿ
ಉಡುಪಿಟ್ಟು ನಕ್ಕವಳು
ಬುದ್ಧ ಬಸವರ ಬೆಳಕು
ಹಣೆ ಬಾಸಿಂಗ ಬಿಗಿದವಳು
ವಚನಗಳ ವೈಭವದಿ
ಮಂಗಳವ ನುಡಿವವಳು
ಅನುಭಾವದ ಅಡುಗೆಯಲ್ಲಿ
ಹಸಿವನ್ನು ತಣಿಸುವಳು
ಕೈ ಹಿಡಿದು ನಡೆಯುತ್ತಾ
ಜೀವ ಪಥ ತೋರುವಳು
ನನ್ನವಳು ನನ್ನವಳು
ನನ್ನೆದೆಯ ಗೂಡಲ್ಲಿ
ಬೆಚ್ಚಗೆ ಇರುವವಳು
ತಾ ನಕ್ಕು ನಗಿಸುತ್ತಾ

ಸ್ಫೂರ್ತಿ ಚಿಲುಮೆಯಾದವಳು


8 thoughts on “ಡಾ ಶಶಿಕಾಂತ ಪಟ್ಟಣ ಕವಿತೆ ನನ್ನವಳು

  1. ಅದ್ಭುತ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮಧುರ ಭವಾದ ನವ್ಯ ಕಾವ್ಯ

  2. ಉತ್ತಮ ಕವನ

    ಸುಳಿವ ಗಾಳಿಯಲ್ಲಿ ಪಸರಿಸಿದ ಶ್ರೀಗಂಧ ಪರಿಮಳ

Leave a Reply

Back To Top