ಕಾವ್ಯ ಸಂಗಾತಿ
ಅಲ್ಲಮ
ಹುಳಿಯಾರ್ ಷಬ್ಬೀರ್
ಅಲ್ಲಮನೊಬ್ಬನೇ
ಇರಬೇಕು
ನನ್ನ ಜಗದೊಳಗ
ಬೆಳಕಿನ ಜೊತೆಯಾಗಿ
ನಡೆದು ಬರುವ ನೆರಳಿನಂತೆ
ಬಸವ ಅಕ್ಕಾದಿ ಶರಣರು
ಪಂಪ ರನ್ನಾದಿಗಳು
ಮುಖಾ ಮುಖಿಯಾದರು
ನಾ ಅಲ್ಲಮನ ನಿಜ ಭಕ್ತ
ಬಾ ಹೊರಗ
ನಾ ಅಲ್ಲಮ
ಬಂದಿದ್ದೀನಿ..
ತಾತ್ವಿಕ ಭಿಕ್ಷೆ ಹಾಕು
ಜಡತ್ವ ಬಿಡು
ಚೈತನ್ಯದಾಯಕನಾಗು..
ಈ ಆಲಾಪನೆಯೇ
ನನ್ನನ್ನು ಜಂಗಮನಾಗಿ
ಅಹಂ ಬಿಡಿಸಿ
ಗೆದ್ದಲ ನೆಲ
ಹಾವು ಹೊಕ್ಕ ಮನೆಯ
ಮುಂಗುಸಿಯಾಗಿಸದೇ
ಬೌದ್ಧಿಕ ಅಲೆಮಾರಿಯಾಗಿಸಿದವ
ನನ್ನ ಅಲ್ಲಮ…!