ಅಂಕಣ ಸಂಗಾತಿ
ಸಕಾಲ
ಪರೀಕ್ಷೆಯೆಂಬ ಒತ್ತಡವನ್ನು
ನಿಭಾಯಿಸುವುದು ಇನ್ನೂ ಸುಲಭ
.
“ಅಯ್ಯೋ ! ನಮ್ಮ ಮಗಳಿಗೆ ಪರೀಕ್ಷೆ ಅಂದರೆನೆ ಭಯ ಕಣ್ರಿ” ಪುಸ್ತಕ ಓದಿದರೂ,ಪ್ರಶ್ನೋತ್ತರ ಬರದ ತಗದರೂ ಅವಳಿಗೆ ಸಮಾಧಾನ ಇಲ್ಲ.ತನ್ನ ಸಹಪಾಠಿಗಿಂತ ತಾನೂ ಹೆಚ್ಚಿಗೆ ಅಂಕ ಪಡಿಬೇಕನ್ನೊ ಹಟ ಬೇರೆ ಅದು ಒಂಥರಾ ಒಳ್ಳೆಯದೆ ಆದ್ರೆ,ಪರೀಕ್ಷಾ ಕೊಠಡಿಗೆ ಹೋಗು ತನಕ ಅವಳಿಗೆ ಯಾರ ಮಾತಾಡಿಸಿದರೂ ಲಕ್ಷ್ಯ ಇಲ್ಲ,ಪೆನ್ನಿನ ರಾಶಿ, ಸರಿಯಾದ ನಿದ್ರೆ ಇಲ್ಲ, ಬೆಳಗಿನ ಹೊತ್ತಿನ ತನಕ ಓದುವುದೇ, ತಿನ್ನುವುದರ ಕಡೆ ಲಕ್ಷ ಕಡಿಮೆ.ಮಾತನಾಡಿಸಿದರೆ ಸಿಟ್ಟು ಮನೆಯ ವಾತಾವರಣ ಐ.ಸಿ.ಯು ದಲ್ಲಿ ಇದ್ದ ರೋಗಿ ತರಹ. ಆಗಾಗ ಮಗಳ ತಲೆ ನೆವರಿಸಿ ನೋಡಿಯೇ ಸಾಕಾಗಿತ್ತು.ಕಣ್ಣ ಗೆಡ್ಡೆಗಳು ಕೆಂಪಾಗಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ನಾವು ಇವಳಿಗೆ ಓದಂತ ತ್ರಾಸ ಕೊಡಬೇಕಿತ್ತು, ನಮಗ ಇವಳ ವರ್ತನೆಯನ್ನು ನೋಡೆ ಪರೀಕ್ಷೆಗೆ ಕಳಿಸೊದೆ ಬೇಡ ಅನಿಸಿತ್ತು.
* ಮಾರ್ಚ್ ಏಪ್ರಿಲ್ ತಿಂಗಳು ಪ್ರತಿವರ್ಷ ಪರೀಕ್ಷೆಗಳ ಸಮಯ.ವರ್ಷದ ಈ ಸಮಯದಲ್ಲಿ ನಾವು ಒತ್ತಡವನ್ನು ಹೋಗಲಾಡಿಸಿ ಪರೀಕ್ಷೆಗಳ ಮೇಲೆ ಗಮನ ಹರಿಸಬೇಕುಪರೀಕ್ಷೆಯ ಉದ್ದೇಶ, ಇದು ಸಮಯದ ಅವಧಿಯಲ್ಲಿ ನಿಮ್ಮ ಕಲಿಕೆಯನ್ನು ನಿರ್ಣಯಿಸಲು ಒಂದು ವ್ಯಾಯಾಮ ಮಾತ್ರ. ಇದು ವಸ್ತುನಿಷ್ಠವಾಗಿರಬೇಕು ಮತ್ತು ವಿದ್ಯಾರ್ಥಿಗಳು ಇದೇ ಸ್ಥಿತಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನಿರ್ಣಯಿಸುವುದು. ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿರುತ್ತಾನೆ. ಒಬ್ಬ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ, ಇದು ಪ್ರಪಂಚದ ಅಂತ್ಯವಲ್ಲ. ಸ್ಪರ್ಧಾತ್ಮಕ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಂಕಗಳು ಮತ್ತು ಸಂಬಂಧಿತ ಅಂಕಗಳು ಮುಖ್ಯವಾಗಿವೆ.
* ನಮ್ಮ ಮಗಳು/ಮಗ ಓದೋದು ಇಷ್ಟಾನೆ,ಪರಿಶ್ರಮ ಪಡಬೇಕು ನಿಜಾ,ತನ್ನೊಳಗಿನ ಸಾಮಥ್ರ್ಯದ ಮೇಲೆ ನಂಬಿಕೆಯಿಟ್ಟು ಮುನ್ನಡೆಯುವ ಮನಸ್ಸು ಯಾರಿಗೆ ಬರಬೇಕು? ನಮಗೆ ಇದೆ ಓದಿನಂತೆ ಫಲಿತಾಂಶ.ಆದ್ರೆ ಮಾನಸಿಕವಾಗಿ,ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಎಂಬ ಅರಿವು ನಮಗಿದೆ.ಅವಳಿಗಿಲ್ಲ.ಎಲ್ಲಿ ಮಾತಾಡಿದರೆ ಸಮಯ ಹಾಳಾಗುತ್ತೆ ಎಂದು ಒದ್ದಾಡುವ ಮಗಳ ಕಂಡು ನಾನು ಈರೀತಿ ಓದಿದ್ರೆ ಯಾವಸ್ಥಾನದಲ್ಲಿರುತ್ತಿದ್ದೆನೋ…ಇಷ್ಟು ತ್ರಾಸ್ ತಗೊಂಡು ಓದಬ್ಯಾಡ ಮಗಳ,ಅದಕ್ಕೊಂದು ಸಮಯ ಮೀಸಲಿಡು,ನಿಯಮ ಬದ್ದ ಓದು ಆರೋಗ್ಯದ ಲಕ್ಷಣದಂತೆ.ಆಗಾಗ ಎಚ್ಚರಿಸಿದ್ದು ಉಂಟು.ನನ್ನಂತೆ ವಿಚಾರ ಮಾಡುವ ಪಾಲಕರಿಗೆ ಮಾತ್ರ.ಮಕ್ಕಳು ನಮ್ಮ ಯಂತ್ರಗಳಲ್ಲ ಅವಕ್ಕೂ ಕನಸುಗಳಿವೆ.ಗ್ರಹಣ ಸಾಮಥ್ರ್ಯ ಭಿನ್ನ. ಹೀಗಾಗಿ ಎಲ್ಲ ಮಕ್ಕಳನ್ನು ಒಂದೆ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ.ಪರೀಕ್ಷೆ ಮಗುವನ್ನು ಮಾನಸಿಕವಾಗಿ,ಭಾವನಾತ್ಮಕವಾಗಿ,ಅಸ್ಥಿರವಾದ ನಡವಳಿಕೆಗಳಿಂದ ಹೊರತು ಪಡಿಸಿ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗದಂತೆ ಪರೀಕ್ಷೆಗೆ ಮಗು ನಸುನಗುತ್ತ ಬರಬೇಕೆ ವಿನಃ,
* ಪರೀಕ್ಷಾ ಕೊಠಡಿ ಪ್ರವೇಶಿಸಿ ತನ್ನ ನಂ ಬಳಿ ಕೂತಾಗ ಎದೆ ಡವಡವ ಬಡಿದುಕೊಳ್ಳದಂತಿರಬೇಕು. ಶಿಕ್ಷಕರು ಪ್ರಶ್ನೆ ಪತ್ರಿಕೆ ಕೈಗಿಟ್ಟಾಗ ಕಂಗಾಲಾದ ಕ್ಷಣಗಳನ್ನು ದೂರತಳ್ಳುವಂತಿರಬೇಕು.. ತಾನು ಓದಿದ್ದು ಒಂದು ಇಲ್ಲಿ ಬಂದ ಪ್ರಶ್ನೆಗಳು ಬೇರೆ.ತಲೆ ಗಿರಗಿಟ್ಲೆತರ ತಿರುಗಿ ಬಿದ್ದ ಮಕ್ಕಳಿಗೇನು ಕಡಿಮೆ ಇಲ್ಲ.ಆದ್ರೆ ಆ ರೀತಿ ಆಗದೇ ಕಣ್ಣರಳಿಸಿ ಅತ್ತ ಇತ್ತ ನೋಡುತ್ತ,ಮನಸ್ಸಿಗೆ ಬಂದ ಹಾಗೆ ಬರೆದು ಬರುವಂತಾಗಬಾರದು. ಆಯಾಸಗೊಂಡಂತೆ ನೀರಸ ಪ್ರತಿಕ್ರಿಯೆ ನೀಡದೆ ಉತ್ಸಾಹ ಭರಿತ ಕ್ಷಣ ವಿದ್ಯಾರ್ಥಿಯದಾಗಬೇಕು.ಅನೇಕ ಮಕ್ಕಳು ಪರೀಕ್ಷಾ ಭಯದಿಂದಲೇ ಪರೀಕ್ಷೆಗೆ ಹಾಜರಾಗದೆ ಇರುವುದನ್ನು ತಪ್ಪಿಸಬೇಕು.ಮಗು ಮಾಮಸಿಕವಾಗಿ ಕುಗ್ಗದಂತೆ ನೋಡಿಕೊಳ್ಳುವುದು ಬಹುಮುಖ್ಯ.
* ಪಾಲಕರು ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಒತ್ತಡವೂ ಮಗುವಿನ ಸೂಕ್ಷ್ಮ ಮನಸ್ಸಿಗೆ ಘಾಸಿಯಾಗಿ ನರಳುತ್ತಿರುವುದು ಕಣ್ಣಿಗೆ ಕಾಣದ/ಕಾಣುವ ನೈಜ ಸಂಗತಿ. ಓದುವ ಪ್ರತಿ ಮಗುವೂ ಪ್ರತಿಶತ ನೂರಕ್ಕೆ ನೂರು ಅಂಕ ಗಳಿಸಬೇಕೆಂಬ ಆಸೆ ಹೊತ್ತಿರುತ್ತದೆ.ಆದ್ರೆ ಆ ಮಗುವಿನ ಗ್ರಹಿಕಾ ಸಾಮಥ್ರ್ಯದ ಮೇಲೆ ಪ್ರತಿ ಕಲಿಕೆ ನಿಂತಿದೆ ಎಂಬ ಸತ್ಯ ಅರಿವಾಗುವುದು ಯಾವಾಗ?ಸೋತ ಮಗು ಹತಾಶಗೊಂಡ ಮಗು ಬದುಕಲು ಶೂನ್ಯವಾ? ಶೇಕಡಾ ೪೦-೭೦% ಆಸುಪಾಸಿನಲ್ಲಿರುವುದೇ ತಪ್ಪಾದರೆ ಹೇಗೆ? ವಿದ್ಯೆ ತಲೆಗೆ ಹತ್ತದ ಮಗು ಜಸ್ಟ್ ಪಾಸಾದ್ರೆ ಸಾಕಪ್ಪಾ ಅಂತ ಕಂಡಕಂಡ ದೇವರಿಗೆ ಹರಕೆ ಹೊತ್ತಿದ್ದು ವಿಶೇಷವೇನಲ್ಲ.
* ಎಲ್ಲ ತಂದೆ ತಾಯಿಗಳಿಗೂ ತಮ್ಮ ಮಗ/ಮಗಳ ಪರೀಕ್ಷಾ ಫಲಿತಾಂಶದ ಮೇಲೆ ಅಪಾರ ನಂಬಿಕೆ.ಆದ್ರೆ ಮಗುವಿನ ವಿಲ್ ಪವರ್ ಎಷ್ಟಿದೆ ಎಂಬುದು ತಿಳಿದಿರಬೇಕು.ನಿಗದಿತ ಸಮಯದಲ್ಲಿ ದೈನಂದಿನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ ಪಾಲಕರು ಪರೀಕ್ಷೆ ಸಮೀಪಿಸುತ್ತಿದೆ ಎಂದಾಕ್ಷಣ ಹಗಲು ರಾತ್ರಿ ಮಕ್ಕಳಿಗೆ ಒತ್ತಡ ನೀಡಲು ಪ್ರಾರಂಭಿಸುತ್ತಾರೆ.ಮೇಲ್ನೋಟಕ್ಕೆ ತಾವೇನು ಒತ್ತಡ ನೀಡಿಲ್ಲವೆಂದರೂ ಮಗು ಮನೆಗೆ ಹೋದ ತಕ್ಷಣ ತನಗಾಗಿ ಮತ್ತೊಂದು ಟೈಮ್ಟೇಬಲ್ ಸಿದ್ದಮಾಡಿರುವ ಸಂಗತಿ ಹೇಳುವಾಗ ಅದರ ಮುಖಭಾವ ನೋವ ಬಿಂಬಿಸುತ್ತದೆ. ಟಾಪರ್ಗಳನ್ನು ಉದಾ.ಹೋಲಿಕೆ ಮಾಡುತ್ತ ಹೇರಿಕೆ ಮಾಡಿದರೆ ಅವರ ನಿರೀಕ್ಷಿತ ಫಲಿತಾಂಶ ನೀಡಲಾಗದೆ ಫಲಿತಾಂಶ ಪ್ರಕಟಣೆಗೂ ಮೊದಲೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು ದುರ್ಬಲ ಮನಸ್ಸಿಗೆ ಹಾಗೂ ಆತಂಕದ ಮಡುವಿಗೆ ತಂದು ಇಟ್ಟವರಾರು?
* ಇಂದಿನ ಶಿಕ್ಷಣ ಅನ್ವಯದ ಆಧಾರದ ಮೇಲೆ ಕಲಿಕಾ ಫಲಕಗಳನ್ನು ಒಳಗೊಂಡು ತರ್ಕಕ್ಕೆ ಒರೆಹಚ್ಚುವ ಶಿಕ್ಷಣವಾಗಿದ್ದು.ಮಕ್ಕಳಿಗೆ ಯಾಂತ್ರಿಕ ಬದುಕಿಗಿಂತ ಕ್ರಿಯಾಶೀಲ ಬದುಕಿಗೆ ಹೆಚ್ಚಿನ ಆದ್ಯತೆ ನೀಡುವುದು ಇದರ ಗುರಿ ಅದೇ ಪ್ರಕಾರ ತರಗತಿಗಳು ನಡೆಯುತ್ತಿದ್ದು.ಶಿಕ್ಷಕರು ಅದೇ ತೆರನಾಗಿ ತರಗತಿಯಲ್ಲಿ ಸ್ವ ಕಲಿಕೆಗೆ ಮುಕ್ತ ಅವಕಾಶ ನೀಡುವುದರೊಂದಿಗೆ ಪರೀಕ್ಷೆ ಎಂದರೆ ಭಯ ಅನ್ನುವುದನ್ನೆ ಮರೆಮಾಚಲು ಸಹಾಯವಾದಿತು..
* ಇಷ್ಟೆಲ್ಲಾ ಆದಾಗ್ಯೂ ಪರೀಕ್ಷೆ ಎಂಬ ಭೂತ ಮಕ್ಕಳನ್ನು,ಪಾಲಕರನ್ನು ಕಾಡುತ್ತಿರುತ್ತದೆ.ಕಷ್ಟ ಪಟ್ಟು ಓದಿದ್ದು ನೆನಪಿರೊಲ್ಲ,ಪರೀಕ್ಷೆ ಅಥವಾ ಮೌಲ್ಯಮಾಪನ ಪ್ರಾರಂಭವಾಗುವುದು ಶಾಲೆಯ ಆರಂಭದಿಂದ. ಪ್ರತಿದಿನ ಪ್ರತಿ ಕ್ಷಣ ಕಲಿಸುವ ಎಲ್ಲ ವಿಷಯಗಳ ಪುಟ್ಟ ಪುಟ್ಟ ಟಿಪ್ಪಣಿ ಮಾಡಿತ್ತ ಸಮಸ್ಯೆ ಎದುರಾದಲ್ಲಿ ಮುಕ್ತ ಸಮಾಲೋಚನೆ ಮಾಡುತ್ತ ಪರಿಣಾಮಕಾರಿ ಅಧ್ಯಯನದತ್ತ ಗಮನ ಹರಿಸಿದರೆ ಸೂಕ್ತ.ಅದಕ್ಕಾಗಿ ಸರಿಯಾದ ವೇಳಾಪಟ್ಟಿ ಸಿದ್ಧಪಡಿಸಬೇಕು. ವಿಷಯವಾರು ಪರಿಣಾಮಕಾರಿ ಅಧ್ಯಯನ ಯೋಜನೆಯನ್ನು ತಯಾರಿಸಿ ಮತ್ತು ಅದಕ್ಕೆ ಅನುಗುಣವಾಗಿ ವಿಷಯಕ್ಕೆ ತಯಾರಿ ನಡೆಸಿ.
*”ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ ಕರ್ಮ ಅಥವಾ ಕೆಲಸವನ್ನು ನೀನು ಮಾಡು ಫಲವನ್ನು ನಾನು ಕೊಡುತ್ತೇನೆ”. ಕೇವಲ ಅಂಕಗಳ ಬಗ್ಗೆ ಯೋಚಿಸಿದರೆ ಪರೀಕ್ಷೆ ಬರೆಯುವ ಖುಷಿ ದೂರವಾಗುತ್ತದೆ. ಅಂಕಗಳ ಬದಲಿಗೆ, ನೀವು ಅತ್ಯುತ್ತಮ ಉತ್ತರಗಳನ್ನು ಬರೆಯಲು ಪ್ರಯತ್ನಿಸುವತ್ತ ಗಮನಹರಿಸಬೇಕು ಮತ್ತು ಅವುಗಳಿಂದ ಸಂತೋಷವನ್ನು ಪಡೆಯಲು ಪ್ರಯತ್ನಿಸಬೇಕು.ನಿಮ್ಮ ಗಮನವು ನಿಮ್ಮ ಹಿಂದಿನ ಉತ್ತಮ ಸ್ಕೋರ್ ಅನ್ನು ಸುಧಾರಿಸಲು ಮತ್ತು ಅದನ್ನು ಇತರರೊಂದಿಗೆ ಹೋಲಿಸಬಾರದು. ಪರೀಕ್ಷೆಗಳು ಪ್ರಾರಂಭವಾದಾಗ, ಎಲ್ಲಾ ವಿದ್ಯಾರ್ಥಿಗಳಿಗೆ ಅಂಕಗಳು ಶೂನ್ಯದಿಂದ ಪ್ರಾರಂಭವಾಗುತ್ತವೆ. ನೀವು ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸಿದಾಗ ಅಂಕಗಳನ್ನು ಪ್ರತಿ ಉತ್ತರದೊಂದಿಗೆ ಸೇರಿಸಲಾಗುತ್ತದೆ.
*ಏನು ಕೇಳಲಾಗುತ್ತದೆ ಎಂಬ ಉದ್ವೇಗವು ಸಾಮಾನ್ಯವಾಗಿದ್ದರೆ, ಹೆದರಿಕೆಯ ಮಟ್ಟವು ಸಮಂಜಸವಾದ ಮಿತಿಯಲ್ಲಿದ್ದರೆ,ಅದು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.ಹೆಚ್ಚು ಉದ್ವೇಗವಿದ್ದರೆ, ಅದು ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ, ಆದ್ದರಿಂದ, ನೀವು ಹಲವಾರು ಸಣ್ಣ ಅಭ್ಯಾಸ ಪರೀಕ್ಷೆಗಳನ್ನು ಮಾಡುವ ಮೂಲಕ ಪೂರ್ವಾಭ್ಯಾಸ ಮಾಡಬೇಕು, ಉದಾಹರಣೆಗೆ ಪರೀಕ್ಷಾ ಹಾಲ್‌ನಲ್ಲಿರುವಂತೆ ಕಲ್ಪಿಸಿಕೊಳ್ಳುವುದು ಮತ್ತು ಇದರ ಮೂಲಕ, ನೀವು ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬಹುದು. ಆತಂಕವು ಸಮಸ್ಯೆಯಾಗಿದ್ದರೆ, ಅಭ್ಯಾಸ ಪರೀಕ್ಷೆಯು ಉತ್ತರವಾಗಿದೆ.
* ಕೈಯಲ್ಲಿ ಬೆವರಿನ ಭಾವನೆಯು ಆತಂಕದ ಸಂಕೇತವಾಗಿದೆ. ನೀವು ಪರೀಕ್ಷಾ ಹಾಲ್‌ನಲ್ಲಿ ತುಂಬಾ ಉದ್ವೇಗದಲ್ಲಿದ್ದರೆ, ಕೆಲವು ನಿಧಾನ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಿ, ಉಸಿರಾಟದ ಲಯವನ್ನು ಸಾಮಾನ್ಯ ಸ್ಥಿತಿಗೆ ತರಲು, ಹಾಗೆ ನೀವು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬಹುದು ಮತ್ತು ಮುಂದುವರಿಯಬಹುದು. ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಲು. ನಿಮ್ಮ ಬರವಣಿಗೆಯ ಅನುಕ್ರಮವನ್ನು ಯೋಜಿಸುವುದು ಸಹ ಮುಖ್ಯವಾಗಿದೆ. ಸುಲಭವಾದವುಗಳಿಗೆ ಉತ್ತರಿಸಲು ಪ್ರಾರಂಭಿಸಿ ಏಕೆಂದರೆ ಇದು ಆತ್ಮವಿಶ್ವಾಸವನ್ನು ಪಡೆಯಲು ಸಹಾಯ ಮಾಡುತ್ತದೆ.
* ಕಷ್ಟಕರವಾದ ಪ್ರಶ್ನೆಗಳಲ್ಲಿ, ಆತ್ಮವಿಶ್ವಾಸವು ಆತಂಕವನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ನೀವು ಅವುಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಲು ಮತ್ತು ಬರೆಯಲು ಸಹಾಯ ಮಾಡಬಹುದು. ಪ್ರಾರಂಭದಲ್ಲಿಯೇ ಸಂಪೂರ್ಣ ಪ್ರಶ್ನೆ ಪತ್ರಿಕೆಯನ್ನು ಓದುವುದು ಒಳ್ಳೆಯದು. ಕೆಲವೊಮ್ಮೆ ನೀವು ಟಿಕ್ ಉತ್ತರವನ್ನು ಇದ್ದಕ್ಕಿದ್ದಂತೆ ನೆನಪಿಸಿಕೊಳ್ಳಬಹುದು. ನಿಮಗೆ ಯಾವುದೇ ಪ್ರಶ್ನೆಗಳು ತಿಳಿದಿಲ್ಲದಿದ್ದರೆ, ಮುಂದಿನದಕ್ಹಿಂತಿರುಗಬಹುದು.
* ನೀವು ಈಗಾಗಲೇ ನಿಮಗೆ ಸಾಧ್ಯವಾದಷ್ಟು ಉತ್ತಮವಾಗಿ ಅಧ್ಯಯನ ಮಾಡಿದ್ದರೆ ಮತ್ತು ಪ್ರಶ್ನೆ ಪತ್ರಿಕೆ ಕಠಿಣವಾಗಿದೆ ಎಂದು ಭಾವಿಸಿದರೆ, ಅದು ಇತರರಿಗೂ ಕಠಿಣವಾಗಿರುತ್ತದೆ. ಮಹತ್ವಾಕಾಂಕ್ಷಿಯಾಗಿರುವುದು ಒಳ್ಳೆಯದು. ಪ್ರತಿ ಪರೀಕ್ಷೆಯು ಹೊಸದು ಮತ್ತು ಆ ದಿನದಲ್ಲಿ ಒಬ್ಬರು ಅದಕ್ಕೆ ಹೊಂದಿಕೊಳ್ಳಬೇಕು. ಪ್ರತಿ ಪರೀಕ್ಷೆಯು ಹೊಸದು ಮತ್ತು ಆ ದಿನದಲ್ಲಿ ಒಬ್ಬರು ಅದಕ್ಕೆ ಹೊಂದಿಕೊಳ್ಳಬೇಕು. ನೀವು ಪರೀಕ್ಷೆಯ ಹಾಲ್‌ಗೆ ಹೋದಾಗ ನಿಮ್ಮ ಉದ್ದೇಶವು ನಿಮ್ಮ ‘ಸಾಧ್ಯವಾದ ಅತ್ಯುತ್ತಮ’ ಕಾರ್ಯಕ್ಷಮತೆಯಾಗಿದೆ, ಇದಕ್ಕಾಗಿ ನಿಮಗೆ ಉತ್ತಮ ಏಕಾಗ್ರತೆ ಮತ್ತು ಅದನ್ನು ಉದ್ದಕ್ಕೂ ನಿರ್ವಹಿಸುವುದು ಮಾತ್ರ ಬೇಕಾಗುತ್ತದೆ.
“ದೇಹಕ್ಕೆ ಅತೀ ಮುಖ್ಯ ನಿದ್ರೆ”
ಮೆದುಳು ಮತ್ತು ದೇಹವು ಸಾಕಷ್ಟು ವಿಶ್ರಾಂತಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ 8ರಿಂದ 9 ಗಂಟೆಗಳ ನಿದ್ರೆಯ ಅಗತ್ಯವಿದೆ. ಫೋನ್‌ಗಳು, ಟ್ಯಾಬ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಲ್ಲಿ ಮಲಗುವ ಮುನ್ನ ತುಂಬಾ ಸಮಯದವರೆಗೆ ಇರುವುದು ಮೆದುಳಿನ ಮಾಹಿತಿಯನ್ನು ಓದುವ, ಉಳಿಸಿಕೊಳ್ಳುವ ಮತ್ತು ಮರುಪಡೆಯುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಮತ್ತು ಏಳಲು ದೇಹವನ್ನು ಪ್ರೋಗ್ರಾಂ ಮಾಡುವುದು ಮುಖ್ಯ.
ಪರೀಕ್ಷೆಯ ತಯಾರಿ ಸಮಯವನ್ನು ಸುಲಭವಾಗಿ ನಿರ್ವಹಿಸಲು ನಿಮ್ಮ ಸ್ವಂತ ವೈಯಕ್ತಿಕ ಅಧ್ಯಯನ ಯೋಜನೆಯನ್ನು ಚಾರ್ಟ್ ಮಾಡಿ. ನಿಮ್ಮ ಅಧ್ಯಯನದ ಅಭ್ಯಾಸಕ್ಕೆ ಸರಿಹೊಂದುವ ರೀತಿಯಲ್ಲಿ ನಿಮ್ಮ ವೇಳಾಪಟ್ಟಿಯನ್ನು ನೀವು ಯೋಜಿಸುತ್ತೀರಿ ಮತ್ತು ನೀವು ಅಧ್ಯಯನ ಮಾಡುವಾಗ ನೀವು ಸಂಪೂರ್ಣವಾಗಿ ಗಮನಹರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.
* “ಕಲಿತ ವಿಷಯಗಳನ್ನು ಬರೆ,ಅದು ಇನ್ನಷ್ಟು ಕಲಿಯಲು ಬರೆ”
ವಿಧಾನವನ್ನು ಬಳಸುವುದು ಪರೀಕ್ಷೆಗಳಿಗೆ ತಯಾರಿ ಮಾಡಲು ಮತ್ತು ಮಾಹಿತಿಯನ್ನು ಉಳಿಸಿಕೊಳ್ಳಲು ಅತ್ಯಂತ ಯಶಸ್ವಿ ಮಾರ್ಗಗಳಲ್ಲಿ ಒಂದಾಗಿದೆ ಎಂದು ಸಾಬೀತಾಗಿದೆ. ವಿದ್ಯಾರ್ಥಿಗಳು ನೇರ ತರಗತಿಯ ಕಲಿಕೆಗಾಗಿ ಶಾಲೆಗೆ ಹಿಂತಿರುಗಿದಂತೆ, ಅವರು ಪೆನ್ನು ಪೇಪರ್‌ಗೆ ಹಾಕಲು ಅಭ್ಯಾಸ ಮಾಡಿಕೊಳ್ಳುವುದು ಬಹಳ ಮುಖ್ಯ, ಇದು ಛಾಯಾಗ್ರಹಣದ ಸ್ಮರಣೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
* ” ಸದಾ ಚಟುವಟಿಕೆಯಿಂದಿರು”
ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯನ್ನು ಮುನ್ನಡೆಸುವುದು ಒತ್ತಡ ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿನ ಕಾರ್ಯ ಮತ್ತು ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂಬ ಮಾತಿದೆ.ಹಿರಿಯರು ಹೇಳುವುದು ಅನುಭವದಿಂದಲೇ ಎಂಬುವುದನ್ನು ಮರೆಯಲು ಸಾಧ್ಯವಾ? ಪರೀಕ್ಷೆಯ ಒತ್ತಡವನ್ನು ಮಸ್ತಕದಲ್ಲಿ ಫಿಕ್ಸ್ ಮಾಡದೇ ಕಲಿತ ವಿಷಯಗಳಲ್ಲಿ ಮನಸ್ಸಿಟ್ಟು ಆತಂಕ ದೂರವಿಟ್ಟು ಪರೀಕ್ಷೆಯ ಸವಾಲನ್ನು ಖುಷಿಯ,ಜಾಣತನದ ಚಾಕಚಕ್ಯತೆಯಲ್ಲಿ ಬಗೆಹರಿಸುವಂತೆ ಮಕ್ಕಳಿಗೆ ಪಾಲಕರು,ಪೋಷಕರು,ಶಿಕ್ಷಕರು, ಸಮುದಾಯ ಬೆಂಗಾವಲಾದರೆ ಇನ್ನಾತರ ಭಯ! ಪರೀಕ್ಷೆಯೆಂಬ ಒತ್ತಡವನ್ನು ನಿಭಾಯಿಸುವುದು ಇನ್ನೂ ಸುಲಭವಲ್ಲವೇ?
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ಪ್ರಸ್ತುತ ವಿದ್ಯಮಾನ ಕ್ಕೆ ಅವಶ್ಯಕ ವಾದ ಉತ್ತಮ ಮೌಲ್ಯಯುತ ಬದುಕಿನ ಪರಿಕ್ಷೆ ಯ ಸಾಧಕ ಬಾಧಕಗಳ ಮಜಲುಗಳನ್ನು ಬಿಂಬಿಸಿದ್ದೀರೀ..
ಓದಿನ ಕಡೆ ಗಮನ,ಆರೋಗ್ಯ,ನಿದ್ರೆ,ಆತಂಕ,ಭಯ,ಇಂದಿನ ಶಿಕ್ಷಣದ ರೂಪರೇಷೆಗಳನ್ನೆಲ್ಲ ಒಳಗೊಂಡ ನಿನ್ನ ಅಂಕಣ ಬರಹ ಅರ್ಥಪೂರ್ಣವಾದದ್ದು.ಮನ ಮುಟ್ಟುವಂತಿದೆ.
ವಿಶೇಷವಾಗಿ ಪಾಲಕರು ಮತ್ತು ವಿಧ್ಯಾರ್ಥಿಗಳು ಓದಲೇ ಬೇಕಾದ ಲೇಖನ….ಅತ್ಯುತ್ತಮ ಬರಹ..
ಪರೀಕ್ಷೆಯು ಒಂದು ಹಬ್ಬವಾಗಲು ಪ್ರೇರಣೆ
ನಿಜ,ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು.ಫಲಾಫಲವನ್ನು ಆ ಭಗವಂತಗೆ ಬಿಡಬೇಕು.ಪರೀಕ್ಷೆ ಎಂಬುದೇ ಸವಾಲು.ಅದು ಒಂದು ನಮಗೆ ಪರೀಕ್ಷೆಯೇ!ಮಗು ಹಾಗೂ ಪಾಲಕರ ಮನಸ್ಥಿತಿಯ ನಡುವಣ ಬದಲಾಗಬೇಕಾದ ಯೋಚನಾ ಲಹರಿಗಳು ಸ್ತುತ್ಯಾರ್ಹ.