ಓರೆನೋಟ ಹರಿಸು-ಇಮಾಮ್ ಮದ್ಗಾರ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಓರೆನೋಟ ಹರಿಸು

ಮಣ್ಣಿನೊಲೆಯಮೇಲಿಟ್ಟ ಹಂಚಿನಂತೆ ಕಾದಿದೆ ತನು
ವಿರಹದುರಿಯಿಂದ

ರಕುತವೇಕೋ ರಭಸದಿ ಹರಿಯುತಿದೆ ನರನಾಡಿಗಳಲಿ
ಬಹುಶಃ ವಿರಹ ದುರಿಯಿಂದ

ನೀನೇ ಹೊತ್ತಿಸಿದ ವಿರಹದುರಿಯಲಿ
ಮೈಕಾಯಿಸಿ ಕೊಳ್ಳುತ್ತಿದೆ ಈ ಮಾ.‌..ಗಿ ಚಳಿ

ತೆರೆಗೆಸರಿದಾಗ ರವಿ
ಸಮುತ್ಪನ್ನ ವಾದಾಗ ವಿರಹ

ನಿಶಿತವಾಗಿ ಸಮ್ಮೋದ ನಿಕ್ಲೇಷವಾಗಿ
ಪೃಥೆಗಾಗಿ ಹವಣಿಸುತ್ತದೆ ಮನ

ಖಾಲಿಯಾದ ಮನಸಿನಲಿ ಮಾತಿನ ಚಿನಕುರುಳಿ ಮೌನದೊಂದಿಗೆ ರಾಜಿಯಾಗಿ ಬಿಡುತ್ತದೆ

ಬದುಕು ನಿತ್ಯದ ದುಂಡುಮಲ್ಲಿಗೆ
ಹೇಳದೇ ಬರುವ ಸಾವಲ್ಲ ಇಮಾಂ

ಒಮ್ಮೆ ಓರೆನೋಟ ವನ್ನಾದರೂ ಹರಿಸು


Leave a Reply

Back To Top