ವಾಣಿ ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಗಜಲ್

ವಾಣಿ ಭಂಡಾರಿ

ನೋವುಗಳೇ ತುಂಬಿ ನರಳುವಾಗ ಈ ಜೀವಕ್ಕೆಲ್ಲಿ ಸಮಾಧಾನ.
ಅಪಮಾನಗಳೆ ಹೊತ್ತು ನಿಂತಿರುವಾಗ ಈ ಮನಸಿಗೆಲ್ಲಿ ಸಮಾಧಾನ.

ನುಡಿದಂತೆ ನಡೆಯೇ ಮುರುಳಾಯಿತೆ ಲೋಕದ ನಿಂದಗೇನು ಹೇಳಲಿ
ಕನಸುಗಳೇ ಕೊಚ್ಚಿ ಬೆಂದು ಹೋಗುವಾಗ ಈ ಹಾದಿಗೆಲ್ಲಿ ಸಮಾಧಾನ.

ಯಾರದೋ ಪಾಪದ ಫಲ ಜೋಳಿಗೆ ತುಂಬಿ ನಗುವಾಗ ಶಾಂತಿ ಮರೀಚಿಕೆ
ದಿನಗಳೇ ತಲ್ಲಣಿಸಿ ಭಾರದಲಿ ಕುಸಿವಾಗ ಈ ಮೌನಕ್ಕೆಲ್ಲಿ ಸಮಾಧಾನ.

ಕಹಿ ಗಂಟುಗಳೇ ಬಿಚ್ಚಿ ವಿಷ ಕಕ್ಕುವಾಗ ನುಂಗಲಾರದ ತುತ್ತು ಬಾಳು
ನಿಂದನೆಗಳೇ ಆತು ಅಪ್ಪಿ ಬಂಧಿಸಿರುವಾಗ ಈ ಭಾವಕ್ಕೆಲ್ಲಿ ಸಮಾಧಾನ.

ಹೆಜ್ಜೆಗಳೇ ನಡಗಿವೆ ಎಂದು ಪರಿತಪಿಸದಿರು ಭಾವಗಳ ಜತನಕೆ ಮೃಡನಿರುವನು
ಅರಿ ಕನಸಿಗೂ ನೆರಳಾಗಿ ಶೂನ್ಯದೆಡೆ ತೆರಳಿಬಿಡು ಸತ್ಯವಾಣಿಗಿಲ್ಲಿ ಸಮಾಧಾನ.


Leave a Reply

Back To Top