ಕಾವ್ಯ ಸಂಗಾತಿ
ಸುಲಭಾ ಜೋಶಿ ಹಾವನೂರ-ಕವಿತೆಗಳು
ಮಂಜು.
ಚಳಿಗಾಲದ;ಬೆಳಗಿನ
ಕತ್ತಲೆ
ಸುತ್ತಲು ಮಂಜಿನ
ಹೊತ್ತಗೆ.
ದಿವಸ್ಪತಿ ದಿನಚರಿ ಎಲ್ಲವೂ ಅಚ್ಚರಿ.
ಎಲ್ಲವೂ ಇದ್ದಂತೆ ಇದ್ದರೂ
ಮಂಜು ಸರಿಯುವ
ವರೆಗೂ ಎಲ್ಲವೂ
ಮಂಜೇ
ಎನ್ನುವಷ್ಟರಲ್ಲೇ
ತತ್ತಕ್ಷಣದ ಬೆಳಗಿನ
ಶುಭ್ರತೆ.
ಅನಿಸಿತಾಗ ನನಗೆ
ನನ್ನ ಸುತ್ತಲ್ಲೆಲ್ಲಾ
ಎಲ್ಲವೂ ಇದ್ದಂತೆ ಇದೆ.
ಚರಾಚರ ಚಲ ಅಚಲ
ನೆಲಮುಗಿಲು
ನನ್ನ ತೋಟದ ಹೂವುಗಳು
ಕಾರು ಗಾಡಿಗಳು
ಸ್ಕೂಲು ಬಸ್ಸು
ಅಟೊ ರಿಕ್ಷಾಗಳು
ಮತ್ತುಬಾಳಿನ ಗಳಿಗೆಗಳು.
*
ಜಗವೆಲ್ಲ ಋತುಚಕ್ರ
ಮಳೆ ಬಿತ್ತು ಮಳೆ ಬಿತ್ತು
ತೂಯ್ದು ಬಸಿಯುತ್ತ.
ಹಸಿರು ಹೂವು ಹಣ್ಣು
ವ್ರಕ್ಷ
ಅದೇ ವಸುಂಧರೆಯ
ವಸ್ತ್ರ.
ಎಳೆಬಿಸಿಲು ಎಳೆಬಿಸಿಲು
ಎಳೆ ಎಳೆಯಾಗಿತ್ತು
ಎಳೆಯುತ್ತ ದಿನದ
ತೇರು.
ಚಳಿಯಿತ್ತು ಚಳಿಯಿತ್ತು
ತುಂಬಿ ತುಳುಕುತ್ತಲ್ಲಿತ್ತು
ತುಳಸಿಕಟ್ಟೆಯ ಸುತ್ತ.
ಪಾರಿಜಾತದ ಪರಿಮಳ
ಸಿಂಪಡಿಸಿತ್ತು.
ಜಗವೆಲ್ಲ ಋತುಚಕ್ರ
ಯಥಾವತ್ ಕಥಾಸರಿತ್
ಸಾಗರ.