ಕಾವ್ಯ ಸಂಗಾತಿ
ಮನದ ಹನಿ
ಚಂದ್ರಿಕಾ ನಾಗರಾಜ್
ಕವಿತೆಗಳನ್ನು
ಒಳ
ತಳ್ಳಿ
ಬೀಗ ಜಡಿದು
ಕುಳಿತೆ
ಕದ
ಬಡಿದು ಬಡಿದು
ಅವು ಕಾವ್ಯ ವಾಚಿಸುತ್ತಿವೆ
ಹುಸಿ ಮುನಿಸಿಂದ
ನಿನ್ನತ್ತ ನೋಡಲು
ನಿನ್ನ ಸ್ಪರ್ಶಕೆ
ಮುಡಿ ತುಂಬಾ
ದುಂಡು ಮಲ್ಲಿಗೆ
ನೀನು
ಮಾತು ಕೊಡಲಿಲ್ಲ
ನಾನೂ,
ಒಲವು ಮಾತನಾಡಿತು
ಕಣ್ಣೊಳಗೆ ಪ್ರೇಮ ಪತ್ರ
ತೆರೆದಿಟ್ಟಿರಲು
ಕಾಗದಕ್ಕೆ ಅಂಟುವ
ಪದಗಳ ಹಂಗೇತಕೆ!?
ನನ್ನದೆಯ ನೋವ
ನಿನ್ನ ಪಾದಕೆರಗಿಸುವೆ
ಹಬ್ಬಿತ್ತಲ್ಲ ಬಿದಿರ ವನ
ಸಂಜೆಯೊಂದು
ಬೆನ್ನು ತಿರುವಿ
ಸಾಗಲಿ ಬಿಡು
ತಿಂಗಳ ಬೆಳಕು
ಸದಾ ಅನುರಾಗಿ
ಮರಳ ಮೇಲಲ್ಲ
ಅಲೆಗಳ ಮೇಲೇಯೇ
ನಿನ್ನ ಹೆಸರ ಗೀಚಿದೆ
ಕಡಲಾದೆ ನೀನು
ಅರ್ಥವಾಗದ ಕವಿತೆಯಾಗ
ಬಯಸುವೆ
ನೀ ನನ್ನೇ
ಮತ್ತೆ ಮತ್ತೆ
ಓದಬೇಕು
ಬೊಗಸೆಯಷ್ಟು ಪ್ರೀತಿಯ
ನೀ ಹೊತ್ತು ತಂದರೆ
ಸಾಕು
ಬದುಕೆಲ್ಲಾ
ಹೊದ್ದು ಸಾಗುವೆ