ಕಾವ್ಯ ಸಂಗಾತಿ
ಸಂಕ್ರಾಂತಿ
ಎಸ್ ವಿ ಹೆಗಡೆ
ನಿರಂತರವಾಗಿ ಒಂದೇ
ದಾರಿಯಲ್ಲಿ ನೇರವಾಗಿ
ನಡೆಯಲಾರದೆ ಸುಸ್ತಾದ ರವಿ
ನೇರವಾಗಿರದ ಹೆದ್ದಾರಿಯಲ್ಲಿ
ಅಲ್ಲಲ್ಲಿ ತಿರುವು ಬಂದಾಗಲೆಲ್ಲ
ಪಥವ ಬದಲಿಸಿದ ಗುರುತೇ
ಸಂಕ್ರಾಂತಿ॥
ಹರಿವ ನೀರಿಗೆ ಗುರಿ ಒಂದೇ
ಎಲ್ಲಿ ಬಿದ್ದರೂ ದಾರಿಯುದ್ದಕ್ಕೂ
ಸುರಿವ ವಿಷವನ್ನೂ ಸಹಿಸಿ
ತನ್ನನ್ನ ಉಪಯೋಗಿಸಿದ
ಯಾರನ್ನೂ ನಿಂದಿಸದೆ
ಸೇರಿ ಸಾಗರವ ವಿಶ್ರಾಂತಿ॥
ಗುರಿಯಿಲ್ಲದ ಜೀವನ ಭ್ರಾಂತಿ
ದಾರಿಯಲ್ಲಿ ಎಷ್ಟೊಂದು
ಸಂಕ್ರಾಂತಿಯ ಬೇವು ಬೆಲ್ಲ
ಸವಿದರೂ ಮನದಲ್ಲಿ
ದಿನ ನಿತ್ಯ ನಡೆಯುವ ಕ್ರಾಂತಿ
ಹುಡುಕುತಿದೆ ಶಾಶ್ವತ ಶಾಂತಿ॥