ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

ಪ್ರಶಸ್ತಿ

ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ

ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್.ಬಿ. ಬಸೆಟ್ಟಿಯವರ ಸಮಾಜ ಸೇವೆ, ಸಂಘಟನೆ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿ ಗುರುಕುಲ ಕಲಾ ಪ್ರತಿಷ್ಠಾನ (ರಿ) ಕೇಂದ್ರ ಸಮಿತಿ ತುಮಕೂರು ಜನೇವರಿ ೨೨, ೨೦೨೩ ಭಾನುವಾರ ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಗುರುಕುಲ ಎರಡನೇ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜನೆ ಮಾಡಲಾಗಿರುವ ಗುರುಕುಲ ಎರಡನೇ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಕೊಡ ಮಾಡುವ ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುರುಕುಲ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹುಲಿಯೂರದುರ್ಗ ಲಕ್ಷ್ಮೀ ನಾರಾಯಣ್ ಅವರು ತಿಳಿಸಿದ್ದಾರೆ. ಸಮ್ಮೇಳನದಲ್ಲಿ ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ, ಗುರುರಾಜ ಹೊಸಕೋಟೆ, ನಿಡಸಾಲೆ ಪುಟ್ಟ ಸ್ವಾಮಯ್ಯ, ಗುರುಕುಲ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಡಾ.ಶಿವರಾಜಗೌಡ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು ಕಲಾವಿದರು ಭಾಗವಹಿಸಲಿದ್ದಾರೆ.

ಹೊಸ ವರ್ಷದ ಮೊದಲ ತಿಂಗಳವೇ ಪ್ರಶಸ್ತಿಯು ಡಾ. ಬಸೆಟ್ಟಿಯವರಿಗೆ ಹರ್ಷ ತಂದಿದೆ. ಪ್ರತಿ ಪುರಸ್ಕಾರ ಮತ್ತು ಪ್ರಶಸ್ತಿಯು ಮತ್ತಷ್ಟು ಜವಾಬ್ದಾರಿ ಹೆಚ್ಚಿಸುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗದಲ್ಲಿ ಕಳೆದ ೧೭ ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕರಾಗಿ, ಸಂಶೋಧನೆ, ಸಮಾಜಸೇವೆ ಮತ್ತು ಕ್ಷೇತ್ರಕಾರ್ಯ, ಸಾಂಸ್ಕೃತಿಕ ಚಟುವಟಿಕೆ, ಸಂಘಟನೆ, ಶಿಕ್ಷಣ ಮತ್ತು ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನ, ಚರ್ಚೆ, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ವಿವಿಧ ವಿಷಯಗಳ ಕುರಿತು ಶೈಕ್ಷಣಿಕವಾಗಿ ದಿನಪತ್ರಿಕೆ ಮತ್ತು ಮಾಸಪತ್ರಿಕೆ, ರಾಜ್ಯ, ರಾಷ್ಟç ಮತ್ತು ಅಂತರರಾಷ್ಟಿçÃಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ರಾಜ್ಯ, ರಾಷ್ಟç ಮತ್ತು ಅಂತರರಾಷ್ಟ್ರೀಯ ಮಟ್ಟದ ೧೪ ಪ್ರಶಸ್ತಿಗಳು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇವರ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ. ಗುಡಸಿ, ಕುಲಸಚಿವರುಗಳು, ಪ್ರೊ. ವೀರಣ್ಣ ರಾಜೂರ, ಪ್ರೊ. ಎಸ್.ವಿ.ಶೆಟ್ಟರ್, ಸಿಂಡಿಕೇಟ್ ಸದಸ್ಯರು, ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕ/ಪ್ರಾಧ್ಯಾಪಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.


One thought on “ಗುರುಕುಲ ವಿದ್ಯಾರತ್ನ (ಶಿಕ್ಷಣ ಕ್ಷೇತ್ರ) ಪ್ರಶಸ್ತಿಗೆ ಡಾ.ಎಸ್.ಬಿ. ಬಸೆಟ್ಟಿ ಆಯ್ಕೆ

Leave a Reply

Back To Top