ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೀತಿಯೆಂದರೆ… !!!

ಅರ್ಚನಾ ಯಳಬೇರು

ಮೌನದೊಳಗಿನ ಸೌಷ್ಠವ
ತುಡಿತಗಳ ರೌರವ
ಅಭೀಷ್ಟಗಳ ಆಹವ
ಹೃದಯ ಸಂಗಮದ ಉಪೋದ್ಘಾತ

ಧಮನಿಗಳ ಸುಷಮೆ
ಚೆಂಬೆಳಕಿನ ಉಪಮೆ
ಕಾದಲನಿಗೆ ಭೂರಮೆ
ಭಾವಗಳ ಆರ್ದ್ರತೆಯ ಉದಂತ

ಜೋತ್ಸ್ನದಂತೆ ಮೇದುರ
ತಲ್ಲಣಗಳ ಬಂಧುರ
ಸಂಹೃಷ್ಟತೆಯ ಸಾದರ
ಒಲವಿನ ಉತ್ಕರ್ಷದ ದ್ಯೋತ

ಉದ್ಭೋಧತೆಗೆ ಪ್ರಭೃತಿ
ಅನುರಾಗದ ಮಹತಿ
ಉದ್ವಹಕೆ ಆಹುತಿ
ಸೌಹಾರ್ದತೆಯಲಿ ಸಮನ್ವಿತ

ಮುಗ್ಧತೆಯಪ್ಪುವ ತುಷಾರ
ಹೊಂಗನಸುಗಳ ಪ್ರಹಾರ
ತವನಿಧಿಯ ಸಖ್ಯಕೆ ಆಹಾರ
ಪ್ರೇಮದ ಅಂಕುರದಲಿ ಶ್ವಸಿತ


About The Author

Leave a Reply

You cannot copy content of this page

Scroll to Top