ರಂಗಸ್ವಾಮಿ ಮಾರ್ಲಬಂಡಿ ಕವಿತೆ-ನವಿಲಿನ ನೋಟ

ಕಾವ್ಯ ಸಂಗಾತಿ

ನವಿಲಿನ ನೋಟ

ರಂಗಸ್ವಾಮಿ ಮಾರ್ಲಬಂಡಿ

ನವಿಲೆ ನರ್ತಿಸುವ ನವಿಲೆ
ನಡಿಗೆಯೋಳ್ ನರ್ತಿಸುವ ನವಿಲೆ…!
ಅಲೋಚನೆಯಲಿ ಬಿಟ್ಟ ಗೆರೆಗಳು…!
ಏಕಾಂಗಿ ನರ್ತನಕ್ಕೆ ಸಾಕ್ಷಿ ಯಾರು…?

ಶ್ರಾವಣ ಮಾಸದ ಸಾಕ್ಷಿಗೆ
ಸಾಯಂಕಾಲದ ಸಂಜೆಯಲಿ ಕಾಣುವ ಆ ನಡಿಗೆಯೇ
ಮನಸ್ಸಿನ ಆಳದ ಪ್ರೇಮಕ್ಕೆ ಚಿಗುರಾಗಿತ್ತು…?!

ಸಮಾಜ ಸಂಬಂದ ಗಳಿಗೋ
ವಿವೇಚನೆದ ನಿರ್ಧಾರ…!
ವಿವೇಚನೆಗೇನು ಗಂಡು ಹೆಣ್ಣಿನ ಸಾಕ್ಷಿಗೆ…!

ಕಣ್ಣೋಟವೇ ಸಾಕ್ಷಿ ನಿನ್ನ ಮೌನ ಪ್ರೇಮಕ್ಕೆ
ಹೊರ ಬೀಳದ ಆ ಮಾತಿಗೆಲ್ಲದೆ ಕಿಮ್ಮತ್ತು…?
ಗೆಳತಿ
ಈ ಇನಿಯನ ಆಶೆಗೆ ದೇಹವೇ ಪಾರವೆಂಬುದು ನಿನ್ನ ಭ್ರಮವೇ ಆದೀತು…!

ಆಶೆ ಯಿಂದದಿ ಇದ್ದ ಈ ವಯಸ್ಸಿಗೆ ಆ ನೋಟವು ಕೂಡ ಆದೀತು ಸಂಜೀವಿನಿ…! ಗೆಳತಿ


Leave a Reply

Back To Top