ಅಮೃತ ವಾಹಿನಿಯೊಂದು- ಅಮೃತಾ ಮೆಹೆಂದಳೆ

ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಹೇಳಿಬಿಡಲೇ ಹೃದಯದ ಈ ರಹಸ್ಯ

(ಹೃದಯದ ಹಾಡುಗಳು)

ಜಬ್ ಕಭೀ ಭೀ ಸುನೋಗೆ ಗೀತ್ ಮೇರೆ

ಸಂಗ್ ಸಂಗ್ ತುಮ್ ಭಿ ಗುನ್ ಗುನಾವೋಗೇ..

ಒಲವೇ,

ನನ್ನೀ ಹೃದಯದ ಹಾಡು ನಿನಗೆ ಕೇಳುತ್ತಿಲ್ಲವೇ? ಕೇಳಿದೆಯಾದರೆ ನಿನ್ನ ಭಾವ ಸುಮ್ಮನಿದೆಯಾದರೂ ಏಕೆ ಮತ್ತು ಹೇಗೆ? ನನ್ನ ಕಣ್ಣೋಟದಲ್ಲೇ ನಾ ನಿನ್ನ ಬಂಧಿಸಿರುವೆನೆನ್ನುತ್ತಿದ್ದೆಯಲ್ಲ, ಹಾಗಿದ್ದರೆ ನೀ ನನ್ನ ಮರೆಯುವುದಾದರೂ ಹೇಗೆ ಸಾಧ್ಯ?

ಬೀತಿ ಬಾತೋಂಕಾ ಕುಛ್ ಖಯಾಲ್ ಕರೋ

ಕುಛ್ ತೋ ಬೋಲೋ ಕುಛ್ ಹಮ್ಸೆ ಬಾತ್ ಕರೋ..

ಮೊದಲಬಾರಿಗೆ ನಮ್ಮ ನೋಟಗಳು ಬೆರೆತಿದ್ದನ್ನು, ಎದೆ ಢವಗುಟ್ಟಿದ್ದನ್ನು, ಕಣ್ಣು ನಾಚಿದ್ದನ್ನು, ತುಟಿ ಮೌನವಾದದ್ದನ್ನು, ಒಂದೇ ನಿಮಿಷದ ಆ ರೋಮಾಂಚನವನ್ನು ಅಲ್ಲಗಳೆಯಲಾರೆ. ಮತ್ತೇಕೆ ಮೌನ? ಒಮ್ಮೆ ಮಾತಾಡಬಾರದೇ?

ರಾಝೆ ದಿಲ್ ಯೆ ತುಝೆ ಬತಾದೂಂಗೀ

ಮೆ ತುಮ್ಹಾರಿ ತೂ ಮಾನ್ ಜಾವೋಗೆ..

ಅರೇ, ನಾನೇ ನಂಬಲು ನಾಚುವ ಹೃದಯದ ರಹಸ್ಯ ಹೇಳಿಬಿಡಲೇ? ನೀ ಕೈ ಚಾಚಿದರೆ ನಾ ಖಂಡಿತ ನಿರಾಕರಿಸಲಾರೆ. ನೀ ಎದೆಯೊಡ್ಡಿದರೆ ಅಪ್ಪುಗೆಯಾಗದಿರಲಾರೆ. ಹೀಗೆಲ್ಲಾ..ಇನ್ನೂ ಬಹಳ ಗುಟ್ಟುಗಳಿವೆ ಗೊತ್ತಾ?

ಮೇರಿ ಖಾಮೋಶಿಯೋಂಕೊ ಸಮ್ಝೋ ತುಮ್

ಜ಼ಿಂದಗಿ ಯಾದ್ ಮೆ ಗುಝಾರೀ ಹೆ

ಮೆ ಮಿಟೀ ಹೂ ತುಮ್ಹಾರಿ ಚಾಹತ್ ಮೆ..

      ನನ್ನ ಮೌನವ ನೀನೇಕೆ ಅರ್ಥೈಸಿಕೊಳ್ಳುತ್ತಿಲ್ಲ? ಹೆಣ್ಣಾದ ನಾನು ಲಜ್ಜೆ ಬಿಟ್ಟು ಇನ್ನೆಷ್ಟು ತಾನೇ ತೆರೆದು ನುಡಿಯಬಲ್ಲೆ? ನಿನ್ನ ನೆನಪಲ್ಲಿ, ನಿನ್ನ ವಿರಹದಲ್ಲಿ ನಾನಾಗಲೇ ಬಳಲಿದ್ದೇನೆ, ಕನಲಿದ್ದೇನೆ. ಮತ್ತೂ ಸೊರಗಬೇಕೆನ್ನುವೆಯೇನು ನಲ್ಲ?

ಔರ್ ಕಿತನಾ ಮುಝೆ ಮಿಟಾವೋಗೆ..

      ಮನದಲ್ಲಿ ನಿನ್ನೇ ಆರಾಧಿಸುತ್ತಾ, ಕಣ್ಣಲ್ಲಿ ನಿನ್ನೇ ಕಾಣುತ್ತಾ, ನಿದ್ದೆಯಲ್ಲಿ ನಿನ್ನೇ ಕನಸುತ್ತಾ, ನನ್ನೆಲ್ಲಾ ಆಸಕ್ತಿಗಳನ್ನು ಬದಿಗಿರಿಸಿ, ಶೂನ್ಯವಾಗುತ್ತಿದ್ದೇನೆ. ಅರಿವಾಗುತ್ತಿಲ್ಲವಾ ನಿನಗೆ?

ದಿಲ್ ಹಿ ದಿಲ್ ಮೆ ತುಮ್ಹೀಸೆ ಪ್ಯಾರ್ ಕಿಯಾ

ಅಪ್ನೆ ಜೀವನ್ ಕೋ ಭೀ ನಿಸಾರ್ ಕಿಯಾ..

      ನಿನ್ನ ಮನದ ಮಾತುಗಳನ್ನಾಲಿಸು. ನನ್ನ ಉತ್ಸಾಹವನ್ನೆಲ್ಲ ನಿಸ್ಸಾರವಾಗಿಸಿಕೊಂಡು ಕುಳಿತು, ನಿನಗಾಗಿ ಹಂಬಲಿಸುತ್ತಿರುವ ನನ್ನೆಡೆ ನೋಡು.

ಕೌನ್ ತಡಪಾ ತುಮ್ಹಾರಿ ರಾಹೋಮೆ

ಜಬ್ ಯೆ ಸೋಚೋಗೆ ಜಾನ್ ಜಾವೋಗೆ..

    ಯೋಚಿಸು ಸ್ವಲ್ಪ ನನ್ನ ಬಗ್ಗೆ. ನಿನ್ನ ಪ್ರೀತಿ ನನ್ನ ಕಣ್ಣಲ್ಲಿ ಪ್ರತಿಫಲನವಾಗದಿದ್ದೀತೆ ಆಗ? ನಿನ್ನ ಹಾದಿಯ ಹೂವು ನಾನಾಗಿರುವುದು ನಿನ್ನರಿವಿಗೆ ಬರದಿದ್ದೀತೆ ಈಗ?

      ತುಮ್ ಮುಝೆ ಯೂ ಭುಲಾನಾ ಪಾವೋಗೆ..

ಹಾಂ, ನೀನೆಷ್ಟೇ ದೂರಾದಂತೆ ನಟಿಸು. ಊಹೂಂ, ನೀ ನನ್ನ ಮರೆಯುವುದು ಅಸಾಧ್ಯ  ಗೊತ್ತಾಯ್ತಾ!!


      ಅಮೃತಾ ಮೆಹೆಂದಳೆ

ಅಮೃತಾ ಮೆಹೆಂದಳೆ ಅವರು ಮೂಲತಃ ಬೆಂಗಳೂರಿನವರು. ಪತಿ ಲೇಖಕ ಸಂತೋಷ್ ಮೆಹೆಂದಳೆ ಮತ್ತು ಮಗಳು ಸಂಜೀವಿನಿಯೊಂದಿಗೆ  ಕಾರವಾರದ ಕೈಗಾದಲ್ಲಿ ವಾಸ. ಇವರು ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆ. ವೃತ್ತಿಯಲ್ಲಿ ಅಕೌಂಟೆಂಟ್, ಕನ್ನಡ ಟ್ಯೂಟರ್, ಶಿಕ್ಷಕಿ, ಸ್ವ ಉದ್ಯೋಗಿಯಾಗಿ ಅನುಭವವುಳ್ಳವರು.

   ಇವರ ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಹಾಯ್ ಬೆಂಗಳೂರು, ಓ ಮನಸೇ, ವಿಜಯ ಕರ್ನಾಟಕ, ವಿಜಯವಾಣಿ, ವಿಶ್ವವಾಣಿ, ಹೊಸ ದಿಗಂತ, ಕರ್ಮವೀರ, ಕನ್ನಡಪ್ರಭ , ಸಖಿ, ಉತ್ಥಾನ, ಕರಾವಳಿ ಮುಂಜಾವು ಮುಂತಾದ  ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

  ಭಾರತೀಯ ಕರ್ನಾಟಕ ಸಂಘ,ಬೆಂಗಳೂರು, ಸಂಕ್ರಮಣ ಸಾಹಿತ್ಯ, ವಿಶ್ವ ಕನ್ನಡಿಗ ಪತ್ರಿಕೆ, ಕಾಸರಗೋಡು ಕನ್ನಡ ಸಂಘ ಮೊದಲಾದ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ.

    2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ  ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯”  ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.

ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ,  ಪ್ರವಾಸದಲ್ಲಿ ಒಲವು.

4 thoughts on “ಅಮೃತ ವಾಹಿನಿಯೊಂದು- ಅಮೃತಾ ಮೆಹೆಂದಳೆ

  1. ಪ್ರೇಮ ಭಾವದ ಉತ್ಕಟತೆ ಅದ್ಭುತವಾಗಿತ್ತು

  2. ವಾವ್ … ಕೊಡವಿ ಕೊಂಡು ಹರಡಿ ಹಾರಾಡಲಿ ಭಾವನೆಗಳು
    ಯಾವುದೇ ಅಡೆತಡೆಗಳ ಗೊಡವೆ ಗಳಿರದೆ ಕುಣಿಯಲಿ ನವ ನವೀನ ಗರಿಗಳ ಹೊತ್ತು ಓದುಗರ ಮನ ತಣಿವಷ್ಟು ಅಮೃತ ವಾಹಿನಿಯಾಗಲಿ

    ಐಕ

Leave a Reply

Back To Top