ಸಂಕ್ರಾಂತಿ ವಿಶೇಷ-ಸಂಕ್ರಮಣ

ಕಾವ್ಯ ಸಂಕ್ರಾಂತಿ

ಸಂಕ್ರಮಣ

ಡಾ. ನಿರ್ಮಲಾ ಬಟ್ಟಲ

ಮಂಜಿನ ಮುಸುಕು
ಹೊದ್ದು ಮುದುಡಿ ಮಲಗಿದ
ಭೂರಮೆಯ ಹೊದಿಕೆ ಸರಿಸಿ
ಸೂರ್ಯ ಬಿಸಿ ಸ್ಪರ್ಶನೀಡಿ ಮುದ್ದಿಸುವ ಕಾಲ…..

ಚಳಿಗೆ ಬೆತ್ತಲಾಗಿ
ನಡುಗುತ್ತಾ ನಾಚಿ ನಿಂತ ಮರ
ಹಸಿರುಚಿಗುರ ಮೈತುಂಬುಟ್ಟು ಮಿರುಗುವ ಕಾಲ ….

ಕೊರೆವ ಚಳಿ ಸರಿಸಿ
ಸುಡುವ ಬಿಸಿಲನ್ನು ಸುರಿಯುತ
ಹಗಲು ರಾತ್ರಿಗಳನು ಸರಿದೂಗಿಸಲು ನೆಸರನು ಪಥ ಬದಲಿಸಿವ ಪುಣ್ಯಕಾಲ…..

ಮಾವಿನ ಮರದಲಿ
ಅಡಗಿ ಕುಳಿತ ಕೋಗಿಲೆ
ಧ್ವನಿ ಹೊಮ್ಮಿಸಿ ಪ್ರಿಯತಮನ ಮಿಲನಕೆ ಕರೆಯುವ ಕಾಲ ….

ಹೊಸತನದ ಆರಂಭಕ್ಕೆ ಯುಗ ಜಗವು ಸಜ್ಜಾಗುವ
ಚಳಿಅಡಗಿ ಬಿಸಿಲುಕ್ಕುವ ಮನ್ವಂತರದ ಕಾಲ ….

ಸುಗ್ಗಿಯ ಹಿಗ್ಗನು ಸವಿಯುತ
ಹುಗ್ಗಿಯ ತಿನ್ನುತ್ತ
ಎಳ್ಳುಬೆಲ್ಲವ ಬೀರುತ್ತ
ಎಲ್ಲರೂ ಸಮರದಲ್ಲಿ
ಬೆರೆಯುತ್ತ ಹಿಗ್ಗುವ ಕಾಲ…


Leave a Reply

Back To Top